ತಾಯಿ ಸಾವಿನ ಸುದ್ದಿ ಕೇಳಿ ದುಬೈನಲ್ಲಿ ಸಾವನ್ನಪ್ಪಿದ ಮಗ

ದುಬೈ: ತಾಯಿನ ಸಾವಿನ ಸುದ್ದಿ ಕೇಳಿದ ಮಗ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ದುಬೈನಲ್ಲಿ ನಡೆದಿದೆ.

ಭಾರತೀಯ ಮೂಲದ ಅನಿಲ್ ಕುಮಾರ್ ಗೋಪಿನಾಥನ್ ಎಂಬವರೆ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಡಿಸೆಂಬರ್ 21 ರಂದು ಘಟನೆ ನಡೆದಿದೆ. ಅನಿಲ್ ಮೂಲತಃ ಕೇರಳದ ಕೊಲ್ಲಂ ಜಿಲ್ಲೆಯಾವರಾಗಿದ್ದು, ಅವರ ತಾಯಿ ಕೌಸಲ್ಯ ಅವರು ಮೃತಪಟ್ಟ ಸುದ್ದಿ ಕೇಳಿ ತಮ್ಮ ರೂಮ್ ನಲ್ಲಿ ಕುಸಿದು ಬಿದ್ದಿದ್ದು, ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಅನಿಲ್ ಕಳೆದ 20 ವರ್ಷಗಳಿಂದ ದುಬೈನ ಉಮ್ ಅಲ್ ಕ್ವೈನ್ ನಗರದಲ್ಲಿನ ಟೈಲರಿಂಗ್ ಶಾಪ್‍ನಲ್ಲಿ ಕಾರ್ಯನಿವಹಿಸುತ್ತಿದ್ದರು. ಅನಿಲ್ ಸಹೋದರ ತಮ್ಮ ತಾಯಿ ಕೌಸಲ್ಯ ಅವರು ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದು, ಈ ಸುದ್ದಿ ಕೇಳಿ ಅನಿಲ್ ಭಾರತಕ್ಕೆ ಬರಲು ಬೇಕಾದ ಸಿದ್ಧತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಮೃತ ಅನಿಲ್ ಅವರ ದೇಹವನ್ನು ಭಾರತಕ್ಕೆ ತರಲು ಕೆಲವು ಕಾನೂನು ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇಂದು ರಾತ್ರಿ ಅಥವಾ ಸೋಮವಾರ ಅನಿಲ್ ಮೃತ ದೇಹವು ಸ್ವಗ್ರಾಮವನ್ನು ಸೇರಲಿದೆ ಎಂದು ಹೇಳಲಾಗಿದೆ.

Comments

Leave a Reply

Your email address will not be published. Required fields are marked *