ಹೆದ್ದಾರಿ ಕಾಮಗಾರಿ ವೇಳೆ ಸಿಲಿಂಡರ್‌ ಸ್ಫೋಟ – ಟ್ರಕ್‌ ಛಿದ್ರ!

ಚೆನ್ನೈ: ಹೆದ್ದಾರಿ ಕಾಮಗಾರಿ ವೇಳೆ ಟ್ರಕ್‌ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ (Cylinder Blast) ಘಟನೆ ತಮಿಳುನಾಡಿನ (Tamil Nadu) ಚಿನ್ನಪ್ಪಂಪಟ್ಟಿಯಲ್ಲಿ ಗುರುವಾರ ಸಂಜೆ ನಡೆದಿದೆ. ಸ್ಫೋಟದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಚತುಷ್ಪಥ ಹೆದ್ದಾರಿ ವೈಟ್‌ ಲೈನ್‌ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಟ್ರಕ್‌ನಲ್ಲಿ ಇರಿಸಲಾಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಅದರಲ್ಲಿದ್ದ ಸಿಲಿಂಡರ್‌ಗಳನ್ನು ರಸ್ತೆಯ ಮೇಲೆ ಬಿಳಿ ರೇಖೆಗಳನ್ನು ಎಳೆಯಲು ಬಳಸಲಾಗುತ್ತಿತ್ತು.

ಹೆದ್ದಾರಿ ಕಾಮಗಾರಿ ವೇಳೆ ಸಿಲಿಂಡರ್‌ ಸ್ಫೋಟ – ಟ್ರಕ್‌ ಛಿದ್ರ!

ಸ್ಫೋಟದಿಂದ ವಾಹನ ಸವಾರರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು. ಕಾರ್ಮಿಕರಿದ್ದ ಸ್ವಲ್ಪ ದೂರದಲ್ಲೇ ಈ ಸ್ಫೋಟ ಸಂಭವಿಸಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಮೊದಲು ಟ್ರಕ್‌ನಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದೆ. ನಂತರ ವ್ಯಕ್ತಿಯೊಬ್ಬರು ಬಕೆಟ್‌ನಲ್ಲಿ ನೀರನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.

ಅದೃಷ್ಟವಶಾತ್, ಘಟನೆಯಲ್ಲಿ ಪ್ರಾಣಾಪಾಯ ಹಾಗೂ ಗಾಯಗಳಾಗಿಲ್ಲ.