ಕೈಯಲ್ಲಿ ಮಗನನ್ನು ಹಿಡಿದುಕೊಂಡೇ ಇಬ್ಬರು ದರೋಡೆಕೋರರನ್ನು ಗುಂಡಿಕ್ಕಿ ಕೊಂದ ಪೊಲೀಸ್ ಅಧಿಕಾರಿ

ರಿಯೋ ಡಿ ಜನೈರೊ: ಆಫ್ ಡ್ಯೂಟಿಯಲ್ಲಿದ್ದ ಸೇನಾ ಪೊಲೀಸ್ ಅಧಿಕಾರಿಯೊಬ್ಬರು ಫಾರ್ಮಸಿಯೊಂದರಲ್ಲಿ ಔಷಧಿ ಕೊಳ್ಳಲು ಹೋಗಿದ್ದಾಗ ಮಗುವನ್ನ ಕೈಯಲ್ಲಿ ಹಿಡಿದುಕೊಂಡೇ ಇಬ್ಬರು ದರೋಡೆಕೋರರನ್ನು ಗುಂಡಿಟ್ಟು ಕೊಂದಿರೋ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

ಇಬ್ಬರು ದರೋಡೆಕೋರರು ಫಾರ್ಮಸಿಯಲ್ಲಿ ದರೋಡೆ ಮಾಡಲು ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರ್ಜೆಂಟ್ ರಫಾಯಲ್ ಸೌಝಾ ಇಬ್ಬರು ಸಶಸ್ತ್ರ ದರೋಡೆಕೋರನನ್ನು ಗುಂಡಿಟ್ಟು ಕೊಂದಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ದರೋಡೆಕೋರರಲ್ಲೊಬ್ಬ ಸೌಝಾ ಅವರತ್ತ ಗುರಿ ಇಟ್ಟಿದ್ದ. ಆದ್ರೆ ಸೌಝಾ ತನ್ನ ಗನ್ ತೆಗೆದುಕೊಂಡು ಸಮೀಪದಿಂದಲೇ ದರೋಡೆಕೋರನನ್ನು ಕೊಂದಿದ್ದಾರೆ.

ಈ ಮಧ್ಯೆ ಸೌಝಾ ಕೆಲಕಾಲ ವಿಡಿಯೋದಲ್ಲಿ ಕಾಣಿಸೋದಿಲ್ಲ. ಘಟನೆಯ ಸಂದರ್ಭದಲ್ಲಿ ಸೌಝಾ ಅವರ ಹೆಂಡತಿಯೂ ಅಲ್ಲಿದ್ದರು. ಭಯದಿಂದ ಕಿವಿ ಮುಚ್ಚಿಕೊಂಡು ಅಲ್ಲೇ ಬಚ್ಚಿಟ್ಟುಕೊಂಡಿದ್ದರು. ನಂತರ ಸೌಝಾ ಕೈಯಲ್ಲಿದ್ದ ಮಗನನ್ನು ಹೆಂಡತಿಗೆ ಕೊಡೋದನ್ನ ವಿಡಿಯೋದಲ್ಲಿ ಕಾಣಬಹುದು. ನಂತರ ಮತ್ತೊಬ್ಬ ದರೋಡೆಕೋರನನ್ನು ಕೊಂದಿದ್ದಾರೆ.

ನವೆಂಬರ್ 18ರಂದು ಸಾವೋ ಪೋಲೋದ ಕ್ಯಾಂಪೋ ಲಿಂಪೋ ಪೌಲಿಸ್ಟಾದ ಫಾರ್ಮಸಿಯಲ್ಲಿ ನಡೆದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

 

Comments

Leave a Reply

Your email address will not be published. Required fields are marked *