ಓಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ವೈರಲ್ ಫೀವರ್​ನಂತಿದೆ: ಯೋಗಿ ಆದಿತ್ಯನಾಥ್

ಲಕ್ನೋ: ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ವೇಗವಾಗಿ ಹರಡುತ್ತಿದೆ. ಆದರೆ ಇದು ವೈರಲ್ ಫೀವರ್​ನಂತೆ ಸೌಮ್ಯ ರೋಗ ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಕೊರೊನಾ ವೈರಸ್‍ನ ಹೊಸ ರೂಪಾಂತರ ತಳಿ ಓಮಿಕ್ರಾನ್ ಮೂರನೇ ಅಲೆ ಭೀತಿಯನ್ನು ಸೃಷ್ಟಿಸುತ್ತಿದೆ ಎಂಬ ವರದಿ ಕುರಿತಂತೆ ಜನರು ಆತಂಕಪಡಬೇಡಿ. ಓಮಿಕ್ರಾನ್ ವೇಗವಾಗಿ ಹರಡುತ್ತದೆ. ಆದರೆ ಅದು ತುಂಬಾ ಸೌಮ್ಯವಾದ ರೋಗಲಕ್ಷಣವನ್ನುಂಟು ಮಾಡುತ್ತದೆ. ವೈರಸ್ ಸೋಂಕು ದುರ್ಬಲಗೊಂಡಿದೆ. ಇದು ವೈರಲ್ ಜ್ವರದಂತಿದ್ದರೂ ಮುನ್ನೆಚ್ಚರಿಕೆ ಅಗತ್ಯ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿಗೆ ಕೊರೊನಾ ಪಾಸಿಟಿವ್

ಮಾರ್ಚ್-ಏಪ್ರಿಲ್ ವೇಳೆ ಹೆಚ್ಚಾಗಿದ್ದ ಕೊರೊನಾ ರೂಪಾಂತರಿ ಡೆಲ್ಟಾದಿಂದ ಜನರು ಚೇತರಿಸಿಕೊಳ್ಳಲು 15-25 ದಿನಗಳ ಕಾಲ ಸಮಯಬೇಕಾಗಿತ್ತು. ಓಮಿಕ್ರಾನ್ ವಿಷಯದಲ್ಲಿ ಹಾಗಿಲ್ಲ. ಓಮಿಕ್ರಾನ್ ಡೆಲ್ಟಾ ಮಾದರಿ ಮಾರಣಾಂತಿಕ ವೈರಸ್ ಅಲ್ಲ ಮತ್ತು ಓಮಿಕ್ರಾನ್ ಸೋಂಕಿತರು 4-5 ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುತ್ತಾರೆ ಎಂದಿದ್ದಾರೆ.

ನವೆಂಬರ್‌ನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಉತ್ತರ ಪ್ರದೇಶದಲ್ಲಿ 8 ಮಂದಿಗೆ ದೃಢಪಟ್ಟಿತ್ತು. ಅದರಲ್ಲಿ ನಾಲ್ವರು ಮಂದಿ ಸಂಪೂರ್ಣವಾಗಿ ಗುಣಮುಖರಾದರು ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

ಸದ್ಯ ಇಂದು ಬೆಳಿಗ್ಗೆ ಉತ್ತರ ಪ್ರದೇಶದಲ್ಲಿ 552 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗಿರುವ 5 ರಾಜ್ಯಗಳಲ್ಲಿ ಉತ್ತರ ಪ್ರದೇಶವು ಸಹ ಒಂದಾಗಿದೆ.

Comments

Leave a Reply

Your email address will not be published. Required fields are marked *