ಓಮಿಕ್ರಾನ್‌ ಸೈಲೆಂಟ್‌ ಕಿಲ್ಲರ್‌: ಸೋಂಕಿಗೆ ತುತ್ತಾಗಿ ಅನುಭವ ಹಂಚಿಕೊಂಡ ಸುಪ್ರೀಂ ಕೋರ್ಟ್‌ ಸಿಜೆಐ

ನವದೆಹಲಿ: ಕೊರೊನಾ ರೂಪಾಂತರ ತಳಿ ಓಮಿಕ್ರಾನ್‌, ಡೆಲ್ಟಾಗಿಂತ ಅಪಾಯಕಾರಿ ಅಲ್ಲದಿದ್ದರೂ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಸ್ವತಃ ಓಮಿಕ್ರಾನ್‌ ಸೋಂಕಿಗೆ ತುತ್ತಾಗಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಓಮಿಕ್ರಾನ್‌ ಪರಿಣಾಮದ ಕುರಿತು ಅನುಭವ ಹಂಚಿಕೊಂಡಿದ್ದಾರೆ.

ನಿಮಗೆ ಗೊತ್ತೆ? ಓಮಿಕ್ರಾನ್‌ ಸೈಲೆಂಟ್‌ ಕಿಲ್ಲರ್‌ ಇದ್ದಂತೆ. ನಾನು ಕೋವಿಡ್‌ ಮೊದಲ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದಾಗ ಕೇವಲ ನಾಲ್ಕು ದಿನಗಳಲ್ಲಿ ಗುಣಮುಖನಾಗಿದ್ದೆ. ಆದರೆ ಮೂರನೇ ಅಲೆಯಲ್ಲಿ ಸೋಂಕು ಪೀಡಿತನಾದಾಗಿನಿಂದ 25 ದಿನಗಳವರೆಗೂ ತೊಂದರೆ ಅನುಭವಿಸಿದ್ದೇನೆ. ಈಗಲೂ ಅದು ನನ್ನ ದೇಹದಲ್ಲಿ ಪರಿಣಾಮ ಬೀರುತ್ತಿದೆ ಎಂದು ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

ಇದು ಓಮಿಕ್ರಾನ್‌, ಪರಿಣಾಮ ಸೌಮ್ಯವಾಗಿರುತ್ತದೆ ಎಂದು ಹಿರಿಯ ವಕೀಲ ವಿಕಾಸ್‌ ಸಿಂಗ್‌, ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ದುರಾದೃಷ್ಟದ ಕಾರಣ ನೀವು ಸಮಸ್ಯೆ ಎದುರಿಸುತ್ತಿದ್ದೀರಿ. ಆದರೆ ಜನರು ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ ಎಂದು ಸಿಂಗ್‌ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ರಮಣ, ಅದನ್ನು ಗಮನಿಸಿದ್ದೇನೆ ಎಂದಿದ್ದಾರೆ. ಜನವರಿ ತಿಂಗಳಲ್ಲಿ ಕೋವಿಡ್‌ ಮೂರನೇ ಅಲೆಯು ಸುಪ್ರೀಂ ಕೋರ್ಟ್‌ನ್ನೂ ಬಾಧಿಸಿದೆ. ಕೋರ್ಟ್‌ನ 10 ನ್ಯಾಯಾಧೀಶರು ಸೋಂಕಿಗೆ ತುತ್ತಾಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಶೇ.30ರಷ್ಟು ಸಿಬ್ಬಂದಿಯನ್ನು ಸೋಂಕು ಬಾಧಿಸುತ್ತಿದೆ. ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಕಹಿ ಸುದ್ದಿ

Comments

Leave a Reply

Your email address will not be published. Required fields are marked *