ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

ರಿಯಾದ್: ಸೌದಿ ಅರೇಬಿಯಾದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ದೃಢಪಟ್ಟ ಮೊದಲ ಪ್ರಕರಣ ವರದಿಯಾಗಿದೆ. ಉತ್ತರ ಆಫ್ರಿಕಾದಿಂದ ವಾಪಸ್ಸಾಗಿದ್ದ ವ್ಯಕ್ತಿ ಸೋಂಕು ಕಾಣಿಸಿಕೊಂಡಿದೆ ಆರೋಗ್ಯ ಸಚಿವಾಲಯ ವರದಿ ಮಾಡಿದೆ.

ಓಮಿಕ್ರಾನ್‌ ಪೀಡಿತ ವ್ಯಕ್ತಿಯನ್ನು ಐಸೊಲೇಷನ್‌ನಲ್ಲಿ ಇರಿಸಲಾಗಿದೆ. ವ್ಯಕ್ತಿಯ ಆರೋಗ್ಯದ ಕುರಿತು ನಿಗಾ ವಹಿಸಲಾಗಿದೆ. ಅಲ್ಲದೇ ಆತನ ಸಂಪರ್ಕಕ್ಕೆ ಬಂದವರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ

ದಕ್ಷಿಣ ಆಫ್ರಿಕಾದ ಏಳು ದೇಶಗಳಿಂದ ವಿಮಾನ ಸಂಚಾರಕ್ಕೆ ಸೌದಿ ಅರೇಬಿಯಾ ನಿರ್ಬಂಧ ವಿಧಿಸಿತ್ತು. ಆದರೆ ಉತ್ತರ ಆಫ್ರಿಕಾದೊಂದಿಗಿನ ವಿಮಾನ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ ಎನ್ನಲಾಗಿದೆ.

ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ವಿಧಿಸಿದ್ದ ಕೆಲವು ನಿರ್ಬಂಧಗಳನ್ನು ಸೌದಿ ಅರೇಬಿಯಾ ತೆರವುಗೊಳಿಸಿದೆ. ಮುಸ್ಲಿಮರು ಹಬ್ಬಗಳ ಸಂದರ್ಭದಲ್ಲಿ ಪರಸ್ಪರರು ಆಲಿಂಗನ ಮಾಡಿಕೊಂಡು ಶುಭಕೋರುವ ವಿಧಾನಕ್ಕೆ ಅಕ್ಟೋಬರ್‌ನಿಂದ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನೂ ಓದಿ: ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಸೌದಿ ಅರೇಬಿಯಾದಲ್ಲಿ ಸುಮಾರು 3.5 ಕೋಟಿ ಜನಸಂಖ್ಯೆ ಇದೆ. ಈವರೆಗೆ ಕೋವಿಡ್‌ ದೃಢಪಟ್ಟ 5,49,000 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 8,836 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಇದುವರೆಗೆ 4.7 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *