ಸಮುದಾಯ ಪ್ರಸರಣ ಹಂತದಲ್ಲಿ ಓಮಿಕ್ರಾನ್, ನಗರಗಳಲ್ಲಿ ತೀವ್ರತೆ ಹೆಚ್ಚು: INSACOG ಮಾಹಿತಿ

ನವದೆಹಲಿ: ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್‌, ಸಮುದಾಯಕ್ಕೆ ಹರಡುವ ಹಂತಕ್ಕೆ ಸಮೀಪಿಸಿದೆ. ನಗರ ಪ್ರದೇಶಗಳಲ್ಲಿ ಹರಡುವಿಕೆ ತೀವ್ರತೆ ಗಣನೀಯವಾಗಿರುತ್ತದೆ ಎಂದು ಐಎನ್‌ಎಸ್‌ಎಸಿಒಜಿ ತಿಳಿಸಿದೆ.

ಐಎನ್‌ಎಸ್‌ಎಸಿಒಜಿ ಭಾನುವಾರ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಓಮಿಕ್ರಾನ್‌ ಹಬ್ಬುವಿಕೆ ಪ್ರಮಾಣ ವ್ಯಾಪಕವಾಗಲಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಸೋಂಕಿನಿಂದ ಗುಣಮುಖರಾಗಿ 3 ತಿಂಗಳ ನಂತರ ಲಸಿಕೆ, ಬೂಸ್ಟರ್ ಡೋಸ್: ಕೇಂದ್ರ

ರಾಷ್ಟ್ರಾದ್ಯಂತ ಕೊರೊನಾ ವೈರಸ್‌ ರೂಪಾಂತರ ಕುರಿತು ಐಎನ್‌ಎಸ್‌ಎಸಿಒಜಿ ಪರಿಶೀಲಿಸುತ್ತಿದೆ. ಸೋಂಕು ಹೇಗೆ ಹರಡುತ್ತದೆ, ಹೇಗೆ ವಿಕಾಸಗೊಳ್ಳುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಸಿದೆ. ಓಮಿಕ್ರಾನ್‌ ಸಾಂಕ್ರಾಮಿಕ ಉಪ ರೂಪಾಂತರದ ಬಿಎ.2 ವಂಶವಾಹಿಯು ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರದ ಕೋವಿಡ್‌ ಸಂಶೋಧನಾ ಸಂಸ್ಥೆ ಹೇಳಿದೆ.

ಕೇಂದ್ರ ಆರೋಗ್ಯ ಮತ್ತು ಮಹಿಳಾ ಕಲ್ಯಾಣ ಸಚಿವಾಲಯ ಅಡಿಯಲ್ಲಿ ಐಎನ್‌ಎಸ್‌ಎಸಿಒಜಿ ಬರುತ್ತದೆ. ವಿವಿಧ ರಾಜ್ಯಗಳು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಿದ್ದ ಮಾದರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಒಟ್ಟು 1,50,710 ಮಾದರಿಗಳನ್ನು ಜಿನೋಮ್‌ ಸ್ವೀಕೆನ್ಸಿಂಗ್‌ಗೆ ಒಳಪಡಿಸಲಾಗಿದೆ. ಆ ಪೈಕಿ 1,27,697 ಮಾದರಿಗಳನ್ನು ಐಎನ್‌ಎಸ್‌ಎಸಿಒಜಿ ವಿಶ್ಲೇಷಣೆಗೆ ಒಳಪಡಿಸಿದೆ. ಇದನ್ನೂ ಓದಿ: ಕೊರೊನಾದಿಂದ ತಮ್ಮ ಮದುವೆಯನ್ನೇ ರದ್ದುಗೊಳಿಸಿದ ನ್ಯೂಜಿಲೆಂಡ್ ಪ್ರಧಾನಿ

Comments

Leave a Reply

Your email address will not be published. Required fields are marked *