ಒಂಭತ್ತನೇ ಅದ್ಭುತ ಈ ವಾರ ಬಿಡುಗಡೆ

ಸಂತೋಷ್ ಕುಮಾರ್ ಬೆಟಗೇರಿ ನಿರ್ದೇಶನದ ‘ಒಂಭತ್ತನೇ ಅದ್ಭುತ’ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಒಂದು ಮರ್ಡರ್ ಮಿಸ್ಟರಿ ಸುತ್ತಮುತ್ತ ನಡೆಯುವ ಚಿತ್ರ ಕೆ.ಕೆ. ಬ್ರದರ್ಸ್ ಲಾಂಛನದಲ್ಲಿ ಮೂಡಿ ಬಂದಿದೆ. ಕೊಲೆ ಸುತ್ತಮುತ್ತಲಿನ ಘಟನೆಯನ್ನು ಹಾಸ್ಯಮಯವಾಗಿ ಹೇಳಲು ಹೊರಟಿರುವ ಈ ಚಿತ್ರಕ್ಕೆ ಸುಶೀಲ್ ಕೋಶಿ ಸಂಗೀತ, ರಾಘವೇಂದ್ರ ಬಿ. ಕೋಲಾರ್ ಛಾಯಾಗ್ರಹಣ, ವೆಂಕಿ ಡಿವಿಡಿ ಸಂಕಲನವಿದೆ.

ವೇಣುಕೃಷ್ಣ ಸಾಹಿತ್ಯ, ಸುಜಿತ್ ಡ್ಯಾನ್ಸರ್ ನೃತ್ಯ ನಿರ್ದೇಶನ, ನಾಗರಾಜ್ ಆರ್ ಕಂತೂರು, ಗೋಪಾಲಕೃಷ್ಣ ಗೌಡ, ಮಂಜಣ್ಣ ಬೆಟ್ಟಹಳ್ಳಿ ಸಹ ನಿರ್ಮಾಪಕರಾಗಿದ್ದು, ಸಂತೋಷ್, ನಯನಾ ಸಾಹಿ, ಸೆಂಚುರಿ ಗೌಡ, ರಘು ಪಾಂಡೇಶ್ವರ, ಮೈಕಲ್ ಮಧು, ಪ್ರಣಯ ಮೂರ್ತಿ, ಅರವಿಂದ ಗೌಡ, ನರಸಿಂಹ ಜೋಷಿ ಮುಂತಾದವರ ತಾರಾಗಣವಿದೆ. ಈ ಚಿತ್ರಕ್ಕೆ ಸಂತೋಷ್ ಕುಮಾರ್ ಬೆಟಗೇರಿ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದು, ನಿರ್ಮಾಣದ ಹೊಣೆಯನ್ನೂ ಅವರೇ ವಹಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *