ಆಪರೇಷನ್‍ಗಾಗಿ ಚಿನ್ನಾಭರಣ ಕದ್ದ ವೃದ್ಧ ಅರೆಸ್ಟ್- ಆತ್ಮಹತ್ಯೆ ಮಾಡ್ಕೊಳ್ಳೋಕೆ ರಿವಾಲ್ವರ್ ಕೂಡ ಕದ್ದಿದ್ರು!

ಬೆಂಗಳೂರು: ವಯೋವೃದ್ಧರೊಬ್ಬರು ಹೊಟ್ಟೆ ಹೊರೆಯೋದಕ್ಕೆ ಮನೆ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಅವರಿಗೆ ಇನ್ನಿಲ್ಲದ ಕಾಯಿಲೆಗಳು ಬಂದು ಬಡಪಾಯಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಆರೋಗ್ಯ ಸರಿ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಅದಕ್ಕೆ ಕಳ್ಳತನ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.

ಯಲಹಂಕ ನ್ಯೂಟೌನ್‍ನಲ್ಲಿರುವ ಉದ್ಯಮಿ ಸತೀಶ್ ಮನೆಯಲ್ಲಿ ಸೋಮವಾರದಂದು ರಿವಾಲ್ವರ್ ಮತ್ತು ಚಿನ್ನಾಭರಣ ಕಳುವಾಗಿದ್ವು. ನಕಲಿ ಕೀ ಬಳಸಿ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದ ಕಳ್ಳ ಎಲ್ಲವನ್ನು ಎತ್ತಿಕೊಂಡು ಹೋಗಿದ್ದ. ಆದ್ರೆ ಕಳ್ಳ ಯಾರು? ಯಾಕಾಗಿ ಕಳ್ಳತನ ಮಾಡಿದ್ದಾನೆ ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿತ್ತು.

ಮಂಗಳವಾರದಂದು ಪೊಲೀಸರು ಕಳ್ಳನನ್ನು ಬಂಧಿಸಿದಾಗ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಪೊಲೀಸರು ಅರೆಸ್ಟ್ ಮಾಡಿದ್ದು ಸತೀಶ್ ಮನೆಯಲ್ಲಿಯೇ ಕೆಲಸ ಮಾಡ್ತಿದ್ದ 63ರ ವಯೋವೃದ್ಧ ಪ್ರಸನ್ನ ಅಯ್ಯಂಗಾರ್ ಅವರನ್ನ.

ವಯಸ್ಸಾದ ಪ್ರಸನ್ನ ಅಯ್ಯಂಗಾರ್ ಅವರನ್ನ ವಿಚಾರಣೆ ಮಾಡಿದಾಗ ಬೆಚ್ಚಿಬೀಳುವ ಸುದ್ದಿ ಹೊರಬಿದ್ದಿದೆ. ಪ್ರಸನ್ನ ಅವರಿಗೆ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿತ್ತು. ಆದ್ರೆ ಆಪರೇಷನ್ ಮಾಡಿಸಿಕೊಳ್ಳಲು ಹಣ ಇರಲಿಲ್ಲ. ಹೀಗಾಗಿ ಆಪರೇಷನ್ ಮಾಡಿಸ್ಕೊಳ್ಳೋ ಸಲುವಾಗಿ ಚಿನ್ನಾಭರಣ ಕದ್ದಿದ್ದರು. ಒಂದು ವೇಳೆ ಆಪರೇಷನ್ ಫೇಲ್ ಆದ್ರೆ ಶೂಟ್ ಮಾಡಿಕೊಳ್ಳೋಕೆ ರಿವಾಲ್ವರ್ ಕದ್ದಿದ್ದರು.

ಇಳಿವಯಸ್ಸಿನಲ್ಲಿ ಬದುಕುವ ಆಸೆ ಇಟ್ಟುಕೊಂಡು ಕಳ್ಳತನ ಮಾಡಿದ್ದ ವಯೋವೃದ್ಧ ಪ್ರಸನ್ನ ಈಗ ಜೈಲು ಪಾಲಾಗಿದ್ದಾರೆ. ಅತ್ತ ಆಪರೇಷನ್ ಇಲ್ಲ ಇತ್ತ ಬದುಕುವ ಆಸೆಯೂ ಇಲ್ಲದಂತಾಗಿದೆ ಪ್ರಸನ್ನ ಅವರ ಬದುಕು.

Comments

Leave a Reply

Your email address will not be published. Required fields are marked *