ಅಣ್ಣನನ್ನು ರಕ್ಷಿಸಲು ಹೋಗಿ ಬಾವಿಯಲ್ಲಿ ಮುಳುಗಿದ ತಂಗಿಯ ರಕ್ಷಣೆ

ಉಡುಪಿ: ವೃದ್ಧರೊಬ್ಬರು ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಚಿಟ್ಪಾಡಿ ಹನುಮಾನ್ ಗ್ಯಾರೇಜ್ ಬಳಿ ನಡೆದಿದೆ.

ನಾರಾಯಣ ಶೇರಿಗಾರ್ ರನ್ನು ರಕ್ಷಿಸಲು ಹೋದ ತಂಗಿ ಸುಶೀಲ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದರು. ಇವರನ್ನು ಮೈಕಲ್ ಡಿಸೋಜ ಅವರು ರಕ್ಷಿಸಿದ್ದಾರೆ.

ಸಹೋದರ ನಾರಾಯಣ ಶೇರಿಗಾರ ಮನೆಯಲ್ಲಿ ಇಲ್ಲದ್ದನ್ನು ತಿಳಿದ ಸಹೋದರಿ ಸುಶೀಲ ಹುಡುಕಾಟ ನಡೆಸಿದ್ದಾರೆ. ಆಗ ಸಹೋದರ ಬಾವಿಗೆ ಬಿದ್ದಿರುವುದು ಕಂಡು ಬಂದಿದೆ. ಸಹೋದರನನ್ನು ರಕ್ಷಿಸಲು ಸುಶೀಲ ತಕ್ಷಣ ಬಾವಿಗೆ ಇಳಿದಿದ್ದಾರೆ. ಆದರೆ ಈಜಲು ಬಾರದೆ ಪರದಾಡಿದ್ದಾರೆ. ಆಗ ಸಹಾಯಕ್ಕಾಗಿ ಚೀರಿದ್ದು, ಸ್ಥಳಕ್ಕೆ ಧಾವಿಸಿದ ಮೈಕಲ್ ಡಿಸೋಜ ಅವರು ಬಾವಿಗೆ ಇಳಿದು ಮಹಿಳೆಯನ್ನು ರಕ್ಷಿಸಿದ್ದಾರೆ.

ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದು, ಮೈಕಲ್ ಡಿಸೋಜ ಅವರ ಸಮಯ ಪ್ರಜ್ಞೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ನಾರಾಯಣ ಶೇರಿಗಾರ ಅವರು ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ನಾರಾಯಣ ಶೇರಿಗಾರ್ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *