ಅಮೆರಿಕಾದಲ್ಲಿ ಮತ್ತೆ ಗುಂಡಿನ ಸದ್ದು- ಓರ್ವ ಮಹಿಳೆ ಬಲಿ, 7 ಜನರಿಗೆ ಗಾಯ

ವಾಷಿಂಗ್ಟನ್: ಅಮೆರಿಕಾದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದ್ದು, ಒಕ್ಲಹೋಮಾ ಉತ್ಸವದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, 7 ಜನರು ಗಾಯಗೊಂಡಿದ್ದಾರೆ.

ಇತ್ತೀಚೆಗಷ್ಟೇ ಟೆಕ್ಸಾಸ್‍ನ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ 21 ಮಂದಿ ಬಲಿಯಾಗಿದ್ದರು. ಅದಿನ್ನು ಮಾಸದೇ ಹಾಗೇ ಇರುವಾಗಲೇ ಒಕ್ಲಹೋಮಾ ಉತ್ಸವದಲ್ಲಿ ಗುಂಡಿನ ಸದ್ದು ಕೇಳಿದೆ. ಈ ಸಂಬಂಧ ಸ್ಕೈಲರ್ ಬಕ್ನರ್(26) ಆರೋಪಿಯನ್ನು ಬಂಧಿಸಲಾಗಿದೆ.

ಒಕ್ಲಹೋಮಾದ ತಾರ್‌ಫ್ಟ್ ಎಂಬಲ್ಲಿ ಸ್ಮಾರಕ ದಿನದ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 1,500 ಜನರು ಭಾಗಿಯಾಗಿದ್ದರು. ಈ ವೇಳೆ ಕೆಲವರ ನಡುವೆ ಮಾತಿನ ಚಕಮಕಿ, ಏರು ದನಿಯ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ಗುಂಡಿನ ದಾಳಿಗೆ 21 ಬಲಿ ಪ್ರಕರಣದ ಬೆನ್ನಲ್ಲೇ ರೈಫಲ್ ಹಿಡಿದು ಕಾಣಿಸಿಕೊಂಡ ಮತ್ತೊಬ್ಬ ವಿದ್ಯಾರ್ಥಿ

ಗುಂಡೇಟಿಗೆ 39 ವರ್ಷದ ಮಹಿಳೆ ಬಲಿಯಾಗಿದ್ದು, ಗಾಯಗೊಂಡವರಲ್ಲಿ ಇಬ್ಬರು ಬಾಲಕರು ಸೇರಿದಂತೆ 7 ಮಂದಿಗೆ ಗಾಯಗಳಾಗಿವೆ. ಘಟನೆ ಕುರಿತು ಒಕ್ಲಾಹಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸ್ಕೈಲರ್ ಬಕ್ನರ್‌ನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಬೇಡಿಕೆ – ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಸ್ಥಳೀಯ ಕೆಫೆಯೊಂದರ ಮಾಲೀಕ ಘಟನೆ ಕುರಿತು ಮಾತನಾಡಿದ್ದು, ಉತ್ಸವದಲ್ಲಿ ನಮಗೆ ದೊಡ್ಡ ಸದ್ದೊಂದು ಕೇಳಿಬಂತು. ನಾವು ಮೊದಲಿಗೆ ಇದೊಂದು ಪಟಾಕಿ ಸದ್ದು ಎಂದು ಭಾವಿಸಿದ್ದೆವು. ಆದರೆ ಅಲ್ಲಿದ್ದ ಜನರು ಹೆದರಿ ಎಲ್ಲೆಂದರಲ್ಲಿ ಓಡಲಾರಂಭಿಸಿದರು. ತ್ರಾಫ್ಟ್ ಸಣ್ಣ ಪಟ್ಟಣವಾಗಿದ್ದು, ಉತ್ಸವದಲ್ಲಿ ಪಾಲ್ಗೊಳ್ಳಲೆಂದು ಬಹಳಷ್ಟು ಜನರು ಆಗಮಿಸಿದ್ದರು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *