ಜೆಡಿಎಸ್ ನಂಬಿ ಮೋಸ ಹೋದ ಒಕ್ಕಲಿಗರು ಈಗ ಅಭಿವೃದ್ಧಿ ಕಡೆಗೆ ಮುಖ ಮಾಡಿದ್ದಾರೆ: ಮಸಾಲಾ ಜಯರಾಮ್

ತುಮಕೂರು: ಜೆಡಿಎಸ್ (JDS) ಪಕ್ಷ ಒಕ್ಕಲಿಗರನ್ನು (Okkaliga) ಕೇವಲ ಮತಕ್ಕಾಗಿ ಮಾತ್ರ ಬಳಸಿಕೊಂಡಿದೆ. ಅವರ ಅಭಿವೃದ್ಧಿ ಮಾಡಿಲ್ಲ. ಒಕ್ಕಲಿಗರು ಈಗ ಅಭಿವೃದ್ಧಿಗಾಗಿ ಬಿಜೆಪಿ (BJP) ಕಡೆ ಮುಖ ಮಾಡಿದ್ದಾರೆ ಎಂದು ತುರುವೇಕೆರೆ (Turuvekere) ಶಾಸಕ ಮಸಾಲಾ ಜಯರಾಮ್ (Masala Jayaram) ಹೇಳಿದ್ದಾರೆ.

ತುರುವೇಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಒಕ್ಕಲಿಗ ಮತದಾರರು ಜೆಡಿಎಸ್ ನಂಬಿ ಮೋಸ ಹೋಗಿದ್ದಾರೆ. ದಬ್ಬೆಗಟ್ಟದಲ್ಲಿ ಒಕ್ಕಲಿಗರೇ ಹೆಚ್ಚಿದ್ದು, ಈ ಹಿಂದೆ ಯಾವ ಅಭಿವೃದ್ಧಿಯೂ ಆಗಿರಲಿಲ್ಲ. ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸವನ್ನು ನಾನು ಶಾಸಕನಾದ ಮೇಲೆ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದಿದ್ದ ಇನ್‌ಸ್ಪೆಕ್ಟರ್‌ ಅಮಾನತು

ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ 75 ವರ್ಷ ವಯಸ್ಸಾಗಿದೆ. ಅವರು ಈಗ ಶಾಸಕರಾಗಿ ಏನೂ ಅಭಿವೃದ್ಧಿ ಮಾಡಲು ಆಗುವುದಿಲ್ಲ. ಮೊಮ್ಮಕ್ಕಳನ್ನು ನೋಡಿಕೊಂಡು ವಿಶ್ರಾಂತಿ ಪಡೆಯಲಿ. ಆಗಾಗಾ ಹೋಗಿ ಅವರ ಕುಶಲೋಪರಿ ವಿಚಾರಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ. ಈಗಾಗಲೇ ಅವರು ಮನೆಯಲ್ಲಿ ಇದ್ದಾರೆ. ಚುನಾವಣೆ (Election) ನಂತರ ಅದು ಮುಂದುವರೆಯಲಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಏಳು ಲಕ್ಷ ಮೌಲ್ಯದ ಮದ್ಯ

Comments

Leave a Reply

Your email address will not be published. Required fields are marked *