ಚಿಕ್ಕಬಳ್ಳಾಪುರ: ಕಂಟ್ರ್ಯಾಕ್ಟರ್ ಗಮನ ಬೇರೆಡೆ ಸೆಳೆದ ಖತರ್ನಾಕ್ ಕಿಡಿಗೇಡಿಗಳು ಅವರ ಬೈಕ್‍ನ ಬಾಕ್ಸ್ ನಲ್ಲಿಟ್ಟಿದ್ದ 1 ಲಕ್ಷದ 90 ಸಾವಿರ ನಗದು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಕಂಟ್ರ್ಯಾಕ್ಟರ್ ವೆಂಕಟೇಶ್ ಕೆನರಾ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿ ತನ್ನ ಬೈಕ್‍ನ ಬಾಕ್ಸ್ ನಲ್ಲಿ ಹಣ ಇರಿಸಿಕೊಂಡು ಮನೆ ಕಡೆಗೆ ತೆರಳಿದ್ದರು. ಆದರೆ ಕಂಟ್ರ್ಯಾಕ್ಟರ್ ಆಗಿದ್ದ ವೆಂಕಟೇಶ್ ಪೈಂಟ್ ಖರೀದಿಗೆ ಅಂತ ಅಂಗಡಿ ಎದುರು ಬೈಕ್ ನಿಲ್ಲಿಸಿ ಖರೀದಿಯಲ್ಲಿ ನಿರತನಾಗಿದ್ದರು.
ಮೊದಲೇ ಬ್ಯಾಂಕ್ ಬಳಿಯಿಂದ ವೆಂಕಟೇಶ್ ರನ್ನು ಫಾಲೋ ಮಾಡೊಕೊಂಡು ಬಂದಿದ್ದ ಕಿಡಿಗೇಡಿಗಳು ದುಡ್ಡು ಎಗರಿಸಿದ್ದಾರೆ. ಇತ್ತ ವೆಂಕಟೇಶ್ ಪೈಂಟ್ ಖರೀದಿಯಲ್ಲಿದ್ದಾಗ ಅವರನ್ನು ಮಾತಾನಾಡಿಸುವ ರೀತಿಯಲ್ಲಿ ಗಮನವನ್ನು ಓರ್ವ ಬೇರೆಡೆ ಸೆಳೆದರೆ, ಉಳಿದ ಇಬ್ಬರು ಬೈಕ್‍ನ ಬಾಕ್ಸ್ ನಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ಕಂಟ್ರ್ಯಾಕ್ಟರ್ ವೆಂಕಟೇಶ್ ಚಿಂತಾಮಣಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಮತ್ತೊಂದೆಡೆ ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂತಹ ಕೃತ್ಯಗಳನ್ನು ಮಾಡುವುದರಲ್ಲಿ ಓಜಿ ಕುಪ್ಪಂ ಗ್ಯಾಂಗ್ ಎಕ್ಸ್ ಫರ್ಟ್ ಆಗಿದೆ. ಹೀಗಾಗಿ ಈ ಕೃತ್ಯ ಸಹ ಅವರೇ ಮಾಡಿರಬಹದು ಅಂತ ತನಿಖೆ ನಡೆಸಲಾಗುತ್ತಿದೆ.
ಮತ್ತೊಂದೆಡೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಇಬ್ಬರು ಓಜಿಕುಪ್ಪಂ ಗ್ಯಾಂಗ್ ನವರನ್ನು ಅರೆಸ್ಟ್ ಮಾಡಿ 11 ಲಕ್ಷ 80ಸಾವಿರ ಸೀಝ್ ಮಾಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply