ಐಟಿ ಕಾಯ್ದೆಯ ಸೆಕ್ಷನ್ 66(ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳೇ ಜೈಲಿಗೆ- ಸುಪ್ರೀಂ

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆ 66 (ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಈ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, 2015ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಎ) ತೆಗೆದು ಹಾಕಲಾಗಿದೆ. ಆದರೆ ಅಧಿಕಾರಿಗಳು ಈ ಸೆಕ್ಷನ್ ಅನ್ವಯವೇ ದೂರು ದಾಖಲಿಸುತ್ತಾರೆ. ಇದು ಅಸಂವಿಧಾನಿಕವಾಗಿದ್ದು, 22 ಮಂದಿ ಮೇಲೆ ಈ ಪ್ರಕರಣದ ಅಡಿ ದೂರು ದಾಖಲಿಸಲಾಗಿದೆ ಎಂದು ಹೇ

ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಜಸ್ಟಿಸ್ ರೋಹಿಂಟನ್ ನಾರಿಮನ್ ಮತ್ತು ವಿನೀತ್ ಸರನ್ ಅವರ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಸೆಕ್ಷನ್ 66 (ಎ) ಅಡಿ ಬಂಧನ ಆಗುತ್ತಿರುವುದು ಶಾಕಿಂಗ್ ಸಂಗತಿಯಾಗಿದ್ದು, ಈ ನಿಯಮದ ಅಡಿ ಬಂಧನ ಮಾಡಲು ಸೂಚಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಅವರನ್ನು ಜೈಲಿಗೆ ಕೂಡ ಕಳುಹಿಸಲಾಗುವುದು ಎಂದು ನ್ಯಾಯ ಪೀಠ ಹೇಳಿದೆ.

ಸೆಕ್ಷನ್ 66 (ಎ) ಅಡಿ ಬಂಧನವಾಗುತ್ತಿರುವ ಕುರಿತು ಸಿವಿಲ್ ಲಿಬರ್ಟಿಸ್ ಫರ್ ಪೀಪಲ್ಸ್ ಯೂನಿಯನ್ (ಪಿಯುಸಿಎಲ್) ಎಂಬ ಸಂಸ್ಥೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅಲ್ಲದೇ ಕೇಂದ್ರ ಅಪರಾಧ ದಳ ನೀಡಿರುವ ಮಾಹಿತಿ ಆಧಾರಿಸಿ ಕ್ರಮಕೈಗೊಳ್ಳುವಂತೆ ಕೋರಿತ್ತು.

ಏನಿದು ಸೆಕ್ಷನ್ 66 (ಎ): ಪರರನ್ನು ನಿಂದಿಸುವುದು, ಸುಳ್ಳು ಸುದ್ದಿ ಹರಡುವುದು, 3ನೇ ವ್ಯಕ್ತಿಯ ವಯಕ್ತಿಕ ಮಾಹಿತಿಗೆ ಧಕ್ಕೆ ಉಂಟು ಮಾಡುವ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕ್ರಮಕೈಗೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಈ ಹಿಂದೆ ಮುಂಬೈನಲ್ಲಿ ಬಾಳ ಠಾಕ್ರೆ ನಿಧನರಾದ ಸಮಯದಲ್ಲಿ ಬಂದ್ ಘೋಷಣೆ ಮಾಡಲಾಗಿತ್ತು. ಬಂದ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಇದನ್ನು ಮತ್ತೊಬ್ಬ ಯುವತಿ ಲೈಕ್ ಮಾಡಿ ಬಂದ್ ಮಾಡುವುದನ್ನ ಪ್ರಶ್ನಿಸಿದ್ದರು. ಪರಿಣಾಮ ಇಬ್ಬರ ಮೇಲೂ ದೂರು ದಾಖಲಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಈ ಘಟನೆ ನಡೆದ ಬಳಿಕ 66 (ಎ) ನಿಯಮದ ಬಗ್ಗೆ ಭಾರೀ ಮಟ್ಟದಲ್ಲಿ ಚರ್ಚೆ ನಡೆದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದ ಬಳಿಕ ಕೇಂದ್ರ ಸರಕಾರ ಈ ಕಾನೂನಿಗೆ ತಿದ್ದುಪಡಿ ತಂದಿತ್ತು. ಆದರೆ ಕಾನೂನು ತಿದ್ದುಪಡಿಯಾದ ಮೇಲೂ ಇದೇ ನಿಯಮದ ಅಡಿ ಹಲವರ ಬಂಧನವಾಗಿತ್ತು.

ವ್ಯಂಗ್ಯ ಚಿತ್ರಕಾರ ಅಸೀಮ್ ತ್ರಿವೇದಿ ಬಂಧನ ಕೂಡ ಇದೇ ಸೆಕ್ಷನ್ ಅಡಿಯಲ್ಲಿ ಮಾಡಲಾಗಿತ್ತು. ಈ ವೇಳೆ ಅವರ ಬಂಧನ ವಿರೋಧಿಸಿ ದೇಶಾದ್ಯಂತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ಮಹಾರಾಷ್ಟ್ರ ಸರ್ಕಾರ ಅವರ ಮೇಲಿನ ಪ್ರಕರಣವನ್ನು ಕೈ ಬಿಟ್ಟಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *