2023ರಲ್ಲಿ ನಡೆಯಲಿದೆ ಭಾರತದ ಮೊದಲ MotoGP ರೇಸ್‌

ನವದೆಹಲಿ: ಬೈಕ್‌ ರೇಸ್‌ ಪ್ರಿಯರಿಗೆ ಗುಡ್‌ ನ್ಯೂಸ್‌. ಟಿವಿಯಲ್ಲಿ ವೀಕ್ಷಿಸುತ್ತಿದ್ದ ಮೋಟೋ ಜಿಪಿ ಸ್ಪರ್ಧೆಯನ್ನು ಇನ್ನು ಮುಂದೆ ನೀವು ಭಾರತದಲ್ಲೇ ನೋಡಬಹುದು. ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ(Buddh International Circuit) 2023ರಲ್ಲಿ ದೇಶದ ಮೊದಲ ಮೋಟೋ ಜಿಪಿ(MotoGP) ರೇಸ್‌ ಆಯೋಜನೆಯಾಗಲಿದೆ.

ಈ ಸಂಬಂಧ ಮೋಟೋ ಜಿಪಿ ಅಧಿಕೃತ ಹೇಳಿಕೆಯನ್ನು ನೀಡಿದ್ದು, ಇಂಡಿಯನ್‌ ಜಿಪಿ (Indian Grand Prix) ಹೆಸರಿನಲ್ಲಿ ಈ ರೇಸ್‌ ಸ್ಪರ್ಧೆ ನಡೆಯಲಿದೆ. ಭಾರತ ನಿಜವಾದ ಆರ್ಥಿಕ ಮತ್ತು ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿದೆ ಎಂದು ತಿಳಿಸಿದೆ.

ಭಾರತವು ಮೋಟಾರ್‌ಸೈಕಲ್ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. 1.4 ಶತಕೋಟಿಗೂ ಹೆಚ್ಚು ಜನಸಂಖ್ಯೆ ಮತ್ತು 20 ಕೋಟಿಗೂ ಹೆಚ್ಚು ಮೋಟಾರ್‌ಸೈಕಲ್‌ಗಳನ್ನು ಹೊಂದಿದೆ. ನಾವು ಭಾರತದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ಅವರಿಗೆ ಕ್ರೀಡೆಯನ್ನು ತರಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: T20 ವಿಶ್ವಕಪ್ ಗೆದ್ದವರಿಗೆ ಸಿಗಲಿದೆ 13.2 ಕೋಟಿ ರೂ.

2023ರಲ್ಲಿ ನಡೆಯಲಿರುವ ರೇಸ್‌ ಕ್ಯಾಲೆಂಡರ್‌ ಬಿಡುಗಡೆಯಾಗಿದ್ದು, ಮೋಟೋ ಜಿಪಿಯ 14ನೇ ರೇಸ್‌ ಭಾರತದಲ್ಲಿ ಸೆ.22 ರಂದು 24 ರವರೆಗೆ ನಡೆಯಲಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿ, ಇದು ಕ್ರೀಡಾ ಉದ್ಯಮಕ್ಕೆ ಐತಿಹಾಸಿಕ ದಿನ ಮತ್ತು ಭಾರತದ 75ನೇ ವರ್ಷದ ಸಂಭ್ರಮಾಚರಣೆಗೆ ಸಿಗುತ್ತಿರುವ ಗೌರವ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶವು ಇಂತಹ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಮೋಟೋಜಿಪಿ ಭಾರತ್‌ಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದಿದ್ದಾರೆ.

ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ 5.125 ಕಿ.ಮೀ ಉದ್ದದ ಬುದ್ಧ ಸರ್ಕ್ಯೂಟ್‌ ಇದ್ದು 2011 ರಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಜೆಪಿ ಗ್ರೂಪ್‌ ಮಾಲೀಕತ್ವವನ್ನು ಹೊಂದಿರುವ ಈ ರೇಸ್‌ ಟ್ರ್ಯಾಕ್‌ನಲ್ಲಿ ಫಾರ್ಮುಲಾ ಒನ್‌ ಸ್ಪರ್ಧೆಗಳು ನಡೆದಿದ್ದವು. 2014ರಲ್ಲಿ ಅಖಿಲೇಶ್‌ ಯಾದವ್‌ ಅಧಿಕಾರದ ಅವಧಿಯಲ್ಲಿ ತೆರಿಗೆ ವಿವಾದ ಉಂಟಾಗಿ ಫಾರ್ಮುಲಾ ಒನ್‌ ಸ್ಪರ್ಧೆ ಸ್ಥಗಿತಗೊಂಡಿತ್ತು. ಪ್ರಸ್ತುತ ಇಲ್ಲ ಫಾರ್ಮುಲಾ ರಿಜಿನಲ್‌ ಇಂಡಿಯನ್‌ ಚಾಂಪಿಯನ್‌ಶಿಪ್‌ ಮತ್ತು ಫಾರ್ಮುಲಾ 4 ಇಂಡಿಯನ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ನಡೆಯುತ್ತಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *