ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಹಾಕುವ ಮುನ್ನ ಚಾಮುಂಡೇಶ್ವರಿಗೆ 2,000 ರೂ. ಕಾಣಿಕೆ

ಬೆಂಗಳೂರು: ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುವ ಮೊದಲು ನಾಡ ದೇವತೆ ಚಾಮುಂಡೇಶ್ವರಿ (Chamundeshwari) ದೇವಿಗೆ ಪ್ರತಿ ತಿಂಗಳು 2,000 ರೂ. ಕಾಣಿಕೆ ಹಾಕುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೂಚನೆ ನೀಡಿದ್ದಾರೆ.

ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್‌ಗೆ ಪರಿಷತ್ತು ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದರು. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಯೋಜನೆ ಜಾರಿಗೂ ಮುನ್ನ ಪೂಜೆ ಸಲ್ಲಿಸಿ 2,000 ರೂ. ಕಾಣಿಕೆ ಹಾಕಲಾಗಿತ್ತು. ಚಾಮುಂಡೇಶ್ವರಿ ಸನ್ನಿಧಿ ಮೈಸೂರಿನಲ್ಲೇ ಕಾರ್ಯಕ್ರಮಕ್ಕೆ ಚಾಲನೆಯನ್ನೂ ನೀಡಲಾಗಿತ್ತು. ಈಗ ಯೋಜನೆ ಯಶಸ್ವಿಯಾಗಿರುವುದರಿಂದ ಚಾಮುಂಡೇಶ್ವರಿಗೂ ಪ್ರತಿ ತಿಂಗಳು 2,000 ರೂ. ಕಾಣಿಕೆ ಹಾಕುವಂತೆ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು. ಇದನ್ನೂ ಓದಿ: ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ: ಜಮೀರ್ ಮತ್ತೊಂದು ಎಡವಟ್ಟು

ದಿನೇಶ್ ಗೂಳಿಗೌಡ ಪತ್ರದ ಹಿನ್ನೆಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಡಿಸಿಎಂ ಡಿಕೆಶಿ ಸೂಚನೆ ನೀಡಿದ್ದಾರೆ. ಇಲಾಖೆಯಿಂದ ಇಲ್ಲವೇ ವೈಯುಕ್ತಿಕವಾಗಿ ಪ್ರತಿ ತಿಂಗಳು ಚಾಮುಂಡೇಶ್ವರಿ ದೇವಿಗೆ 2,000 ಕಾಣಿಕೆ ಕಳುಹಿಸಿ ಕೊಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಫ್ರೀಡಂಪಾರ್ಕ್ ಮಾತ್ರವಲ್ಲದೇ ಟೌನ್‌ಹಾಲ್‌ನಲ್ಲೂ ಪ್ರತಿಭಟನೆಗೆ ಅವಕಾಶ – ಸಿಎಂ ಭರವಸೆ