ಸಾಮಾನ್ಯರ ಮೇಲಿರುವ ಬೆಲೆ ಏರಿಕೆ ಒತ್ತಡ ಕಡಿಮೆ ಮಾಡಲು ಯತ್ನ: ನಿರ್ಮಲಾ

ವಾಷಿಂಗ್ಟನ್: ಭಾರತದ ಹಣದುಬ್ಬರವು ಟಾಲರೆನ್ಸ್ ಬ್ಯಾಂಡ್‍ಗಿಂತ ವೇಗವಾಗಿ ಏರಿದೆ. ಆದರೆ ಅದು ಕೆಟ್ಟದ್ದಲ್ಲ ಎಂದು ಮಂಗಳವಾರ ಸಂಜೆ ವಾಷಿಂಗ್ಟನ್‍ನಲ್ಲಿ ಅಟ್ಲಾಂಟಿಕ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಕಚ್ಚಾ ಬೆಲೆ ಸೇರಿದಂತೆ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಸವಾಲುಗಳಾಗಿವೆ. ರಷ್ಯಾ-ಉಕ್ರೇನ್ ಯುದ್ಧ ಎಲ್ಲ ಆರ್ಥಿಕತೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಕೆ.ಸಿ.ಜನರಲ್‍ನಲ್ಲೂ ತಾಯಿ-ಶಿಶು ಆಸ್ಪತ್ರೆ ‘ವಾಣಿ ವಿಲಾಸ’ ಮಾದರಿಯಲ್ಲಿ ನಿರ್ಮಾಣ: ಕೆ.ಸುಧಾಕರ್

ಸಹಜವಾಗಿ, ಬೆಲೆಯ ಏರಿಕೆ ಹೊರೆ ಸಾಮಾನ್ಯ ಜನರ ಮೇಲಿದೆ. ನಾವು ಅವರನ್ನು ಈ ಒತ್ತಡದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಈ ಎಲ್ಲ ಸವಾಲುಗಳ ಹೊರತಾಗಿಯೂ, ನಾವು ಈಗ ಎದ್ದು ನಿಲ್ಲಲು ಮತ್ತು ವ್ಯವಸ್ಥೆಯನ್ನು ಸಮರ್ಥವಾಗಿ ಸುಧಾರಣೆ ಮಾಡುವ ಶಕ್ತಿಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಾಸ್ತವವಾಗಿ, ಹಣದುಬ್ಬರ ಗ್ರಾಹಕ-ಬೆಲೆ ಆಧಾರಿತ ಮತ್ತು ಸಗಟು ಬೆಲೆ-ಆಧಾರಿತ ಕ್ರಮಗಳು ಮಾರ್ಚ್‍ನಿಂದ ಏರುಪೇರಾಗಲು ಪ್ರಾರಂಭ ಮಾಡಿದೆ. ಚಿಲ್ಲರೆ ವ್ಯಾಪಾರದ ಹಣದುಬ್ಬರವು ಹೆಚ್ಚಾಗಿದೆ. ಇದನ್ನೂ ಓದಿ: KGF-2 ನೋಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಪೈರಿಂಗ್ – ಆರೋಪಿ ಪತ್ತೆಗೆ ಎರಡು ತಂಡ ರಚನೆ 

ಸತತ 14 ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚುತ್ತ ಇತ್ತು. ಇದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿತ್ತು. ಏಪ್ರಿಲ್ 19 ಮತ್ತು ಏಪ್ರಿಲ್ 11, 2020 ರ ನಡುವೆ ಶೇಕಡಾ 10 ರಷ್ಟು ತೈಲ ಬೆಲೆ ಏರಿಕೆಯಾಗಿದೆ. ಪಂಪ್ ಬೆಲೆಗಳಲ್ಲಿ ಹೆಚ್ಚಳವು ಶೀಘ್ರದಲ್ಲೇ ಬರಲಿದೆ.

Comments

Leave a Reply

Your email address will not be published. Required fields are marked *