ಭುವನೇಶ್ವರ: ಶಾಸಕನೊಬ್ಬ ಜನರ ಮೇಲೆ ಕಾರು ಹರಿಸಿ 22 ಮಂದಿಗೆ ಗಾಯಗೊಂಡಿದ್ದಾರೆ. ಈ ವೇಳೆ ಸ್ಥಳೀಯರು ಒಟ್ಟಾಗಿ ಶಾಸಕನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೊರ್ದಾ ಜಿಲ್ಲೆಯ ಬಾನ್‍ಪುರ್ ಬ್ಲಾಕ್ ಕಛೇರಿಯ ಬಳಿ ನಡೆದಿದೆ.
ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ತಮ್ಮ ವಾಹನವನ್ನು ಜನರ ಮೇಲೆ ಹರಿಸಿದ್ದಾರೆ. ಈ ವೇಳೆ ಏಳು ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ.

ನಡೆದಿದ್ದೇನು?: ಬಾನ್‍ಪುರ ಬ್ಲಾಕ್ ಕಚೇರಿ ಬಳಿ ಬ್ಲಾಕ್ ಅಧ್ಯಕ್ಷರ ಆಯ್ಕೆ ನಡೆಯುತ್ತಿತ್ತು. ಈ ವೇಳೆ ಬ್ಲಾಕ್ ಕಚೇರಿಯಲ್ಲಿ ಹಲವರು ಜಮಾಯಿಸಿದ್ದರು. ಈ ವೇಳೆ ಪ್ರಶಾಂತ್ ಜಗದೇವ್ ಜನರ ಮೇಲೆ ವಾಹನ ಹರಿಸಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಪ್ರಶಾಂತ್ ಜಗದೇಬ್ ಮೇಲೆ ಹಲ್ಲೆ ನಡೆಸಿದ್ದು, ಜಗದೀಶ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಖೋರ್ಧಾ ಪೊಲೀಸ್ ವರಿಷ್ಠಾಧಿಕಾರಿ ಅಲೆಖ್ ಚಂದ್ರ ಪಾಹಿ ತಿಳಿಸಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರುತಿರಾಜ್ ಹರಿಚಂದನ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ಅಮಾನವೀಯ ಕೃತ್ಯ. ಇಂತಹ ಶಾಸಕರಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ರಫೇಲ್ ಯುದ್ಧ ವಿಮಾನ ಎದುರಿಸಲು ಚೀನಾದ ಜೆ-10ಸಿ ಫೈಟರ್ ಜೆಟ್ ಖರೀದಿಸಿದ ಪಾಕಿಸ್ತಾನ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಜೆಪಿ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ, ಜಗದೇವ್ ಅವರನ್ನು ಬಿಜು ಜನತಾ ದಳದಿಂದ ಅಮಾನತುಗೊಳಿಸಲಾಗಿತ್ತು. ಇದೇ ಘಟನೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಇದೀಗ ಜನರ ಮೇಲೆ ಕಾರು ಹರಿಸಿ ಜನರಿಂದ ಥಳಿತಕ್ಕೊಳಗಾಗಿದ್ದಾರೆ.

Leave a Reply