ಯಾರೂ ಮಾಹಿತಿ ನೀಡಿಲ್ಲವೆಂದು ತನ್ನ ಮದುವೆಗೆ ವರ ಶಾಸಕ ಗೈರು- ವಧು ಕೇಸ್‌

ಭುವನೇಶ್ವರ್: ಬಿಜೆಡಿ ಶಾಸಕನೊಬ್ಬ ತನ್ನ ಮದುವೆಗೆ ಹೋಗದ ಹಿನ್ನೆಲೆಯಲ್ಲಿ ವಧು ಪ್ರಕರಣ ದಾಖಲಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ.

ವಿವಾಹ ನೋಂದಣಾಧಿಕಾರಿ ಕಚೇರಿಗೆ ಬಾರದ ಕಾರಣ ವಂಚಿಸಿದ್ದಾರೆ ಎಂದು ಬಿಜೆಡಿ ಶಾಸಕ ಬಿಜಯ್ ಶಂಕರ್ ದಾಸ್ (30) ಅವರ ವಿರುದ್ಧ ವಧು ಜಗತ್‍ಸಿಂಗ್‍ಪುರ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೇ 17ರಂದು ದಂಪತಿ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 30 ದಿನಗಳ ನಂತರ ಮದುವೆಕಾರ್ಯಕ್ಕೆ ವಧು ತನ್ನ ಕುಟುಂಬದೊಂದಿಗೆ ಅಲ್ಲಿಗೆ ತಲುಪಿದ್ದರೂ ವರನಾದ ಶಾಸಕ ಬಂದಿರಲಿಲ್ಲ. ಇದರಿಂದಾಗಿ ಮಹಿಳೆ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಗುರುದ್ವಾರದ ಮೇಲೆ ದಾಳಿ: 100ಕ್ಕೂ ಹೆಚ್ಚು ಸಿಖ್ಖರು, ಹಿಂದೂಗಳಿಗೆ E-ವೀಸಾ

ಈ ಬಗ್ಗೆ ಮಾತನಾಡಿದ ವಧು, ಕಳೆದ 3 ವರ್ಷಗಳಿಂದ ಬಿಜಯ್ ಶಂಕರ್ ದಾಸ್ ಜೊತೆ ಸಂಬಂಧ ಹೊಂದಿದ್ದೇನೆ. ನಿಗದಿತ ದಿನಾಂಕದಂದು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ ಅಂದು ರಿಜಿಸ್ಟರ್ ಕಚೇರಿಗೆ ಬಂದಿರಲಿಲ್ಲ. ಜೊತೆಗೆ ಶಾಸಕರ ಸಹೋದರ ಮತ್ತು ಕುಟುಂಬದ ಸದಸ್ಯರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಶಾಸಕರು ನನ್ನ  ಫೋನ್ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ವಧು ಆರೋಪಿಸಿದ್ದಾರೆ.

ಬಿಜಯ್ ಶಂಕರ್ ದಾಸ್ ಈ ಬಗ್ಗೆ ಮಾತನಾಡಿ, ಆಕೆಯನ್ನು ಮದುವೆಯಾಗುವುದನ್ನು ನಿರಾಕರಿಸಿಲ್ಲ. ಮದುವೆ ನೋಂದಣಿಗೆ ಇನ್ನೂ 60 ದಿನಗಳು ಇವೆ. ಆದ್ದರಿಂದ ನಾನು ಬಂದಿಲ್ಲ. ಮದುವೆ ರಿಜಿಸ್ಟರ್ ಕಚೇರಿಗೆ ಹೋಗಲು ಯಾರೂ ನನಗೆ ತಿಳಿಸಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ:  ಬಿ.ಶ್ರೀರಾಮುಲು

Live Tv

Comments

Leave a Reply

Your email address will not be published. Required fields are marked *