ಬೀದಿ ಬದಿಯಲ್ಲಿ ಹುಡುಗರ ಜೊತೆ ಮಾತನಾಡುವಂತಿಲ್ಲ- ವಿವಿ ಆದೇಶ

ಸಾಂದರ್ಭಿಕ ಚಿತ್ರ

ಭುವನೇಶ್ವರ್: ವಿದ್ಯಾರ್ಥಿನಿಯರು ಬೀದಿ ಬದಿಯಲ್ಲಿ ನಿಂತು ಹುಡುಗರ ಜೊತೆಗೆ ಮಾತನಾಡುವಂತಿಲ್ಲ ಎಂದು ಒಡಿಶಾದ ವಿಶ್ವವಿದ್ಯಾಲಯವೊಂದು ಖಡಕ್ ಆದೇಶವನ್ನು ಹೊರಡಿಸಿದೆ.

ಸಂಬಲ್‍ಪುರ್ ಸಮೀಪದ ಬರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ಯುನಿವರ್ಸಿಟಿ ಆಫ್ ಟೆಕ್ನಾಲಜಿ (ವಿಎಸ್‍ಎಸ್‍ಯುಟಿ)ನಲ್ಲಿ ಇಂತಹ ಆದೇಶ ಹೊರಡಿಸಲಾಗಿದೆ. ಯುನಿವರ್ಸಿಟಿಯಲ್ಲಿ ಐದು ವಿದ್ಯಾರ್ಥಿನಿಯರ ವಸತಿ ನಿಲಯಗಳಿದ್ದು, ಅವುಗಳಲ್ಲಿ ರೋಹಿಣಿ ಹಾಲ್ ಆಫ್ ರೆಸಿಡೆನ್ಸ್‍ನ ನೋಟಿಸ್ ಬೋರ್ಡ್ ನಲ್ಲಿ ಆದೇಶ ಪ್ರತಿಯನ್ನು ಹಾಕಲಾಗಿದೆ.

ಆದೇಶದಲ್ಲಿ ಏನಿದೆ?:
ಉಪಕುಲಪತಿಗಳ ನಿರ್ದೇಶನದಂತೆ ರೋಹಿಣಿ ಹಾಲ್ ಆಫ್ ರೆಸಿಡೆನ್ಸಿ ವಿದ್ಯಾರ್ಥಿನಿಯರು ರಸ್ತೆ ಬದಿಯಲ್ಲಿ ನಿಂತು ಹುಡುಗರ ಜೊತೆಗೆ ಮಾತನಾಡಬಾರದು. ಈ ಸೂಚನೆ ಪಾಲಿಸಲು ವಿಫಲರಾದರೆ ಅಂಥವರ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪತ್ರವೊಂದನ್ನು ನೋಟಿಸ್ ಬೋರ್ಡ್ ನಲ್ಲಿ ಅಂಟಿಸಲಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊಫೆಸರ್ ಪಿ.ಸಿ.ಸ್ವೈನ್, ವಿದ್ಯಾರ್ಥಿನಿಯರ ರಕ್ಷಣೆಯ ಹೊಣೆ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಆದೇಶದ ಪ್ರತಿಯನ್ನು ನೋಟಿನ್ ಬೋರ್ಡ್ ಗೆ ಅಂಟಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *