ಕೊಡಗು | ʻಪ್ರವಾಸಿಗರಿಗೆ ಹುಡ್ಗೀರು, ಆಂಟಿಯರು ಲಭ್ಯವಿದ್ದಾರೆʼ ಅಂತ ಪೋಸ್ಟ್‌ – ಬಾಗಲಕೋಟೆ ಯುವಕ ಅರೆಸ್ಟ್‌

– ಹಣ ಕಳೆದುಕೊಂಡು ಮೋಸ ಹೋದವನಿಂದಲೇ ಕೃತ್ಯ

ಮಡಿಕೇರಿ: ಕೊಡಗಿನಲ್ಲಿ (Kodagu) ಪ್ರವಾಸಿಗರಿಗೆ (Tourists) ಹುಡುಗಿಯರು ಮತ್ತು ಆಂಟಿಯರು ಡೇಟಿಂಗ್‌ ಮಾಡಲು ಲಭ್ಯವಿದ್ದಾರೆ ಅಂತ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ ಹಾಕಿದ್ದ ಯುವಕನನ್ನ ಕೊಡಗು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ನಿವಾಸ ನಾಗಪ್ಪ (26) ಬಂಧಿತ ಯುವಕ. ಕಿಡಿಗೇಡಿ, ಮಡಿಕೇರಿ ನಗರದ (Madikeri City) ವ್ಯಾಪ್ತಿಯಲ್ಲಿ ಆಂಟಿಯರು, ಹುಡುಗಿಯರು ಡೇಟಿಂಗ್‌ಗೆ ಸಿಕ್ತಾರೆ, ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಅಂತ ಮೊಬೈಲ್‌ ನಂಬರ್‌ ಕೂಡ ಹಾಕಿದ್ದ. ಇದರ ವಿರುದ್ಧ ಪ್ರವಾಸಿಗರು ಮಾತ್ರವಲ್ಲದೇ ಕೊಡಗಿನ ಸ್ಥಳೀಯರಿಂದಲೂ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ ದಸರಾ ವೇಳೆ ಯುವತಿಯರನ್ನ ಕೆಣಕ್ಕಿದ್ರೆ ಹುಷಾರ್‌; ಮದುವೆ ಮಂಟಪಕ್ಕೆ ಕರೆತಂದು ಕೇಸ್‌ ದಾಖಲು

Kodagu Social Media Post

ಈ ಹಿಂದೆ ಪುಣೆಯಲ್ಲಿ ಹುಡುಗಿಯರು ಸಿಕ್ತಾರೆ ಅನ್ನೋ ಪೋಸ್ಟ್‌ ನಂಬಿ ನಾಗಪ್ಪ 4,000 ರೂ. ಹಣ ಕಳೆದುಕೊಂಡಿದ್ದ. ಹೀಗಾಗಿ ತಾನೂ ಕೂಡ ಏಕೆ ಮಹಿಳೆಯರ ಫೋಟೋಗಳನ್ನ ಹಾಕಿ ಹಣ ಮಾಡಬಾರದು ಅಂತ ಆಲೋಚನೆ ಮಾಡಿದ್ದ. ಹಲವಾರು ಕಡೆ ಇದೇ ರೀತಿ ಪೋಸ್ಟ್‌ಗಳನ್ನ ಹಾಕಿ 30 ರಿಂದ 40 ಸಾವಿರ ರೂ. ಸಂಪಾದನೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ – ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

ಅದೇ ರೀತಿ ಮಡಿಕೇರಿಯಲ್ಲೂ ಹುಡ್ಗೀರು, ಆಂಟಿಯರು ಸಿಕ್ತಾರೆ ಅಂತ ಪೋಸ್ಟ್‌ ಹಾಕಿದ್ದ. ಇದನ್ನ ನಂಬಿ ಮಡಿಕೇರಿ ಹಾಗೂ ಕುಶಾಲನಗರದ ಕೆಲ ಯುವಕರು ಹಣ ಕಳೆದುಕೊಂಡಿದ್ದಾರೆ ಅನ್ನೋ ಮಾಹಿತಿ ಇದೆ. ಬಳಿಕ ಈ ಪೇಜ್‌ ವಿರುದ್ಧ‌ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಕೊಡಗು | ವಯನಾಡ್‌ ಸಮೀಪದ ತಮರಶೆರಿ ಘಾಟ್ ಬಳಿ ಭೂಕುಸಿತ; ಬದಲಿ ಮಾರ್ಗಕ್ಕೆ ಸೂಚನೆ