ಗದಗ: ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಕಾರ್ಮಿಕರ ಮುಷ್ಕರ ಹಿನ್ನೆಲೆ ಸ್ವಚ್ಛತಾ ಸಿಬ್ಬಂದಿ ಬಾರದೆ ಸ್ವತಃ NWKRTC ಅಧಿಕಾರಿಗಳೇ ಜಿಲ್ಲೆಯ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ.
ಇಂದು ಮತ್ತು ನಾಳೆ ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ಕೊಟ್ಟಿವೆ. ಈ ಮುಷ್ಕರಕ್ಕೆ ಬಹುತೇಕ ಕಾರ್ಮಿಕರು ಬೆಂಬಲ ನೀಡುತ್ತಿದ್ದು, ಇಂದು ಕೆಲಸ ನಿರ್ವಹಿಸಲು ನಿರಾಕರಿಸಿದ್ದಾರೆ. ಹೀಗಾಗಿ ಇಂದು ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಡಲು ಸಿಬ್ಬಂದಿ ಬರದಿದ್ದ ಕಾರಣ ಸ್ವತಃ ಅಧಿಕಾರಿಗಳೇ ನಿಲ್ದಾಣವನ್ನು ಸ್ವಚ್ಛಗೊಳಿಸಲು ಮುಂದಾದರು. ಕೈಯಲ್ಲಿ ಪೊರಕೆ ಹಿಡಿದು ಬಸ್ ನಿಲ್ದಾಣದ ಮೇಲ್ವಿಚಾರಕರು ಹಾಗೂ ಇತರೇ ಅಧಿಕಾರಿಗಳು ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.

ಭಾರತ್ ಬಂದ್ ಹಿನ್ನಲೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿದೆ. ಆದ್ರೆ ಬಸ್ ನಿಲ್ದಾಣದಲ್ಲಿ ಕಸವಿದ್ದ ಕಾರಣಕ್ಕೆ, ಇಡೀ ಬಸ್ ನಿಲ್ದಾಣಕ್ಕೆ ನೀರು ಹೊಡೆದು ಕಸ ಗುಡಿಸಿ ಸಾರಿಗೆ ಅಧಿಕಾರಿಗಳು ಸ್ವಚ್ಛ ಮಾಡಿದ್ದಾರೆ. ಬೆಳಿಗ್ಗೆಯಿಂದ ಬಸ್ ಹಾಗೂ ಪ್ರಯಾಣಿಕರು ಇಲ್ಲದೇ ಬಣಗುಡುತ್ತಿರುವ ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಿದ ಅಧಿಕಾರಿಗಳ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply