ಇಸ್ರೇಲ್‌ನ ಭಯಾನಕ ಅನುಭವ ಬಿಚ್ಚಿಟ್ಟ ನಟಿ ನುಶ್ರತ್

ಸ್ರೇಲ್‌ನಲ್ಲಿ (Israel) ಗುಂಡಿನ ಚಕಮಕಿ ಜೋರಾಗಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ ಬಾಲಿವುಡ್ ನಟಿ ನುಶ್ರತ್ (Nushrratt Bharuccha) ಸಿಲುಕಿಕೊಂಡಿದ್ದರು. ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇಸ್ರೇಲ್‌ನಲ್ಲಿ ನಡೆದ ಘಟನೆ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

ಇಸ್ರೇಲ್- ಹಮಾಸ್ ನಡುವೆ ಯುದ್ಧ ನಡೆಯುತ್ತಿದ್ದ ವೇಳೆ ಸಿಲುಕಿಕೊಂಡಿದ್ದ ನಟಿ ನುಶ್ರತ್ ಅವರು ತಮ್ಮ ಭಯಾನಕ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಮರೆಯಲಾಗದ ಭಯಾನಕ ಅನುಭವ ಎಂದು ಹೇಳಿದ್ದಾರೆ. ಈಗ ಸುರಕ್ಷಿತವಾಗಿ, ಆರಾಮಾಗಿದ್ದೇನೆ ಎಂದು ಅಭಿಮಾನಿಗಳಿಗೆ ನಟಿ ಮಾಹಿತಿ ನೀಡಿದ್ದಾರೆ.

2 ದಿನಗಳ ಹಿಂದೆ, ಟೆಲ್ ಅವೀವ್‌ನಲ್ಲಿರುವ ನನ್ನ ಹೋಟೆಲ್ ಕೋಣೆಯಲ್ಲಿ ಬಾಂಬ್ ಸ್ಫೋಟಗಳು ಮತ್ತು ಸೈರನ್‌ಗಳ ಶಬ್ದ ನಮ್ಮನ್ನು ಎಚ್ಚರಿಸಿತ್ತು. ನಮ್ಮನ್ನು ತಕ್ಷಣ ಸುರಕ್ಷಿತವಾಗಿಡಲು ನೆಲಮಾಳಿಗೆಗೆ ಕರೆದೊಯ್ಯಲಾಯಿತು. ನಾನು ಈ ರೀತಿಯ ಪರಿಸ್ಥಿತಿಯಲ್ಲಿ ಯಾವತ್ತೂ ಇರಲಿಲ್ಲ ಎಂದು ನುಶ್ರತ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ನಾನು ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಗಂಡನ ಥರ ಇರಬೇಕು- ಸೋನು

ಆದರೆ, ಇಂದು ನಾನು ನನ್ನ ಮನೆಯಲ್ಲಿ ಇದ್ದೇನೆ. ಯಾವುದೇ ಬಾಂಬ್ ಸ್ಫೋಟಗಳು ಅಥವಾ ಸೈರನ್‌ಗಳ ಸದ್ದಿಲ್ಲದೇ ಎದ್ದಿದ್ದೇನೆ. ಹೀಗಾಗಿ ಇವತ್ತು ನನಗೆ ಅರ್ಥವಾಗಿದ್ದು, ಹೀಗೆ ಎಚ್ಚರವಾಗುವುದೇ ದೊಡ್ಡ ವಿಷಯ. ಈ ದೇಶದಲ್ಲಿ ಬದುಕಲು ನಾವು ತುಂಬಾ ಅದೃಷ್ಟವಂತರು. ನಮಗೆ ರಕ್ಷಣೆಯಿದೆ ಮತ್ತು ಸುರಕ್ಷಿತವಾಗಿರುತ್ತೇವೆ ಎಂದು ನಟಿ ಮಾತನಾಡಿದ್ದಾರೆ.

ಭಾರತ ಸರ್ಕಾರ, ಭಾರತ ಮತ್ತು ಇಸ್ರೇಲ್ ರಾಯಭಾರ ಕಚೇರಿಗಳು ಮತ್ತು ತನ್ನ ಸುರಕ್ಷತೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಶೀಘ್ರದಲ್ಲೇ ಇಸ್ರೇಲ್‌ನಲ್ಲಿ ಶಾಂತಿ ನೆಲೆಸಲಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

ನುಶ್ರತ್ ಅವರು ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದರು. ಅಕ್ಟೋಬರ್ 7ರಂದು ನಟಿ ನುಶ್ರತ್ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದರು. ಅವರು ಕೊನೆಯ ಬಾರಿಗೆ ಶನಿವಾರ (ಅ.8) ಮಧ್ಯಾಹ್ನ ಸುಮಾರು 12.30ಕ್ಕೆ ಮಾತನಾಡಿದ್ದರು. ಆದಾದ ಬಳಿಕ ಮತ್ತೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ನಾವು ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದರು. ನಟಿ ನುಶ್ರತ್ 36 ಗಂಟೆಗಳ ಬಳಿಕ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರ ಮುಖದಲ್ಲಿ ನೋವು ಮತ್ತು ಭಯವಿತ್ತು. ಕಣ್ಣಿನ ತುಂಬಾ ನೀರು ತುಂಬಿಕೊಂಡಿತ್ತು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]