9 ವರ್ಷದಿಂದ ಪ್ರೀತಿಸಿದ ಯುವಕ ಕೈಕೊಟ್ಟ- ಮೊಬೈಲ್ ಟವರ್ ಏರಿ ನರ್ಸ್ ಆತ್ಮಹತ್ಯೆಗೆ ಯತ್ನ

ಹೈದರಾಬಾದ್: 9 ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ಕೈ ಕೊಟ್ಟಿದ್ದರಿಂದ ಮನನೊಂದು ನರ್ಸ್ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿರುವ ವರಂಗಲ್‍ನ ಹೊರವಲಯದಲ್ಲಿ ನಡೆದಿದೆ.

ದಮೇರಾ ಮಾಲಿನಿ(23) ಆತ್ಮಹತ್ಯೆಗೆ ಯತ್ನಿಸಿದ ನರ್ಸ್. ಮಾಲಿನಿ ಪೇಗಾದಾಪಲ್ಲಿ ಗ್ರಾಮದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮಾಲಿನಿ ತನ್ನದೇ ಗ್ರಾಮದ ಯುವಕ ನಕ್ಕಾ ಬಾಬುನನ್ನು 9 ವರ್ಷದಿಂದ ಪ್ರೀತಿಸುತ್ತಿದ್ದಳು.

ಇತ್ತೀಚೆಗೆ ನಕ್ಕಾ ಬಾಬುಗೆ ಸಿಂಗರೆನಿ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಸಿಕಿತ್ತು. ಕೆಲಸ ಸಿಕ್ಕಿದ ಕಾರಣ ಆತನಿಗೆ ಹೆಚ್ಚು ವರದಕ್ಷಿಣೆಯನ್ನು ಪಡೆಯಬೇಕೆಂಬ ಆಸೆ ಇತ್ತು. ಹಾಗಾಗಿ ಆತ ಮಾಲಿನಿಯನ್ನು ದೂರ ಮಾಡುತ್ತಿದ್ದನು.

ಮಾಲಿನಿ ಈ ವಿಷಯದ ಬಗ್ಗೆ ತನ್ನ ಪ್ರಿಯಕರ ನಕ್ಕಾ ಬಾಬುನನ್ನು ಸಮಾಧಾನಪಡಿಸಿ ಮಾತನಾಡಲು ಯತ್ನಿಸಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ಅವಳು ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ.

ಈ ವೇಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಲಿನಿಯ ಮನವೊಲಿಸಿ ಆಕೆಯನ್ನು ಮೊಬೈಲ್ ಟವರ್‍ನಿಂದ ಕೆಳಗಿಳಿಸಿ ಕರೆದುಕೊಂಡು ಬಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *