ಎನ್‍ಪಿಎಲ್ ಕ್ರಿಕೆಟ್ ಟೂರ್ನಿ ಕಿರೀಟ ನೆಲಮಂಗಲ ಇಂಡಿಯನ್ಸ್ ತಂಡಕ್ಕೆ

ನೆಲಮಂಗಲ: ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲಿದೆ. ಕ್ರಿಕೆಟ್ ಪ್ರೇಮಿಗಳಿಗೆ ದಿನವೂ ಹಬ್ಬವೋ ಹಬ್ಬ. ಆದರೆ ನೆಲಮಂಗಲ ಕ್ರಿಕೆಟ್ ಪ್ರೇಮಿಗಳಿಗೆ ಈಗಾಗಲೇ ಎನ್‍ಪಿಎಲ್ ಶುರುವಾಗಿ ಐದು ತಂಡಗಳ ಸೆಣಸಾಟಕ್ಕೆ ಇದು ತೆರೆಬಿದ್ದಿದೆ.

ಆದರೆ ನೆಲಮಂಗಲ ಕ್ರಿಕೆಟ್ ಪ್ರೇಮಿಗಳಿಗೆ ಕ್ರಿಕೆಟ್ ಜ್ವರ ಈಗಾಗಲೇ ಶುರುವಾಗಿ ತೆರೆಬಿದ್ದಿದ್ದು, ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಕ್ರಿಕೆಟ್ ಪ್ರೇಮಿಗಳಿಗಾಗಿ ಬಿ.ಎಂ ಬಾಬು ಎನ್ನುವವರು ಟಿ20 ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದ್ದರು. ಇಂದು ಟೂರ್ನಿ ಫೈನಲ್ ಮ್ಯಾಚ್ ನಡೆಯಿತು. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಮ್ಯಾಚ್ ನೋಡಿ ಸಖತ್ ಎಂಜಾಯ್ ಮಾಡಿದ್ದಾರೆ.

ಇನ್ನೂ ಇಂದಿನ ಹೈವೋಲ್ಟೇಜ್ ಮ್ಯಾಚ್ ಆಗಿ ಮಾರ್ಪಾಡಾಗಿದ್ದ ಫೈನಲ್ ಕದನ ನೆಲಮಂಗಲ ಇಂಡಿಯನ್ಸ್ ಮತ್ತು ನೆಲಮಂಗಲ ಫೈಟರ್ಸ್ ಮಧ್ಯೆ ನಡೆಯಿತು. ಅತ್ಯಂತ ರೋಚಕತೆಯಿಂದ ನಡೆದ ಪಂದ್ಯದಲ್ಲಿ ಕೊನೆಯ ಓವರ್ ವರೆಗೂ ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ನೆಲಮಂಗಲ ಇಂಡಿಯನ್ಸ್ ತಂಡ ನೆಲಮಂಗಲ ಪ್ರೀಮಿಯರ್ ಕಪ್ ಕೀರಿಟವನ್ನು ಮುಡಿಗೇರಿಸಿಕೊಂಡಿತು.

ತುಮಕೂರು ವಿಧಾನ ಪರಿಷತ್ ಸದಸ್ಯ ಬಿಎಂಎಲ್ ಕಾಂತರಾಜು ಬಹುಮಾನವನ್ನ ವಿತರಿಸಿದರು. ಗೆದ್ದ ತಂಡ ಸೋತ ತಂಡವನ್ನು ಜೊತೆಯಲ್ಲಿಯೇ ಕರೆದುಕೊಂಡು ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದ್ದು ಕ್ರೀಡಾ ಸ್ಪೂರ್ತಿಗೆ ಸಾಕ್ಷಿಯಾಗಿ ತೆರೆಕಂಡಿದೆ.

Comments

Leave a Reply

Your email address will not be published. Required fields are marked *