ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊರಟ್ಟಿಗೆ ನೋಟಿಸ್‌

ಬೆಳಗಾವಿ: ವಿಧಾನ ಪರಿಷತ್‌ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹೊತ್ತಿನಲ್ಲೇ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊರಟ್ಟಿಗೆ ನೋಟಿಸ್‌ ನೀಡಲಾಗಿದೆ.

ಪುಸ್ತಕವೊಂದರ ಮುಖಪುಟದ ಮೇಲೆ ರಾಷ್ಟ್ರೀಯ ಲಾಂಛನ, ಪರಿಷತ್‌ ಸಭಾಪತಿ ಪೀಠ ಚಿತ್ರ ಪ್ರಕಟಿಸಿ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಹೊರಟ್ಟಿ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ‌ಬಿಸ್ವಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್‌ ಏನು? – ಪಬ್ಲಿಕ್‌ ಟಿವಿ ʼವಿದ್ಯಾಪೀಠʼಕ್ಕೆ ಬನ್ನಿ ಮಾಹಿತಿ ಪಡೆಯಿರಿ

ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ʻಬಸವರಾಜ ಪಥʼಎಂಬ ಪುಸ್ತಕ ಪ್ರಕಟಿಸಿತ್ತು. ಪುಸ್ತಕದ ಮುಖಪುಟದ ಮೇಲೆ ರಾಷ್ಟ್ರೀಯ ಲಾಂಛನ, ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ವಿವರಣೆ ಕೇಳಿ ಹೊರಟ್ಟಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

Comments

Leave a Reply

Your email address will not be published. Required fields are marked *