ನಟ ಅರ್ಜುನ್ ಸರ್ಜಾಗೆ ನೋಟಿಸ್

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾಗೆ ನೋಟಿಸ್ ಜಾರಿ ಮಾಡಲಾಗಿದೆ.

ಹೌದು. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನಟನಿಗೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಈ ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ನಾಳೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿಚಾರಣೆ ನಡೆಯಲಿದೆ.

ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ನಟ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ದೂರು ಕೂಡ ದಾಖಲಿಸಿದ್ದರು. ಶೃತಿ ದೂರಿನಂತೆ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

ಈಗಾಗಲೇ ದೂರು ಸಂಬಂಧ ಪೊಲೀಸರು ಕೃತ್ಯ ನಡೆದ ಮೂರು ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಅಲ್ಲದೇ ಶೃತಿ ಹರಿಹರನ್ ದೂರಿನಲ್ಲಿ ತಿಳಿಸಿದ್ದ ಐವರು ಸಾಕ್ಷಿಗಳ ಹೇಳಿಕೆಯನ್ನು ಕೂಡ ಪಡೆದುಕೊಂಡಿದ್ದಾರೆ. ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್, ನಿರ್ಮಾಪಕ ಉಮೇಶ್, ಮೇಕಪ್ ಮ್ಯಾನ್ ಕಿರಣ್, ಸಹ ನಿರ್ದೇಶಕಿ ಮೋನಿಕಾ ಹಾಗೂ ಶೃತಿ ಸಹಾಯಕ ಬೋರೆಗೌಡ ಹೇಳಿಕೆಯನ್ನು ಕೂಡ ದಾಖಲಿಸಿಕೊಳ್ಳಲಾಗಿದೆ.

 

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಅರ್ಜುನ್ ಸರ್ಜಾ ವಿಚಾರಣೆಗೆ ಅಗಮಿಸೋ ನಿರೀಕ್ಷೆಯಲ್ಲಿದ್ದು, ನಾಳೆಯ ಬೆಳವಣಿಗೆ ತೀವ್ರ ಕುತೂಹಲ ಹುಟ್ಟಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=ocJXRWTsd60

https://www.youtube.com/watch?v=pqnp-LBxMcc

Comments

Leave a Reply

Your email address will not be published. Required fields are marked *