ಸನ್ನಿ ಲಿಯೋನ್‍ಗೆ ಇಂದು ಡಬಲ್ ಧಮಾಕಾ

ಮುಂಬೈ: ಬಾಲಿವುಡ್‍ನ ಬೇಬಿ ಡಾಲ್ ಸನ್ನಿ ಲಿಯೋನ್ ಇಂದು ಡಬಲ್ ಖುಷಿಯಲ್ಲಿದ್ದಾರೆ. ಸನ್ನಿ ಲಿಯೋನ್ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 37ನೇ ವಯಸ್ಸಿನಲ್ಲಿಯೂ ಸನ್ನಿ ತಮ್ಮ ಮಾದಕತೆಯ ನಟನೆಯಿಂದಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಮಾರ್ಚ್ ನಲ್ಲಿ ಅವಳಿ ಮಕ್ಕಳಿಗೆ ತಾಯಿಯಾಗಿರುವ ಸನ್ನಿ ಲಿಯೋನ್ ಇಂದು ಹುಟ್ಟುಹಬ್ಬದ ಆಚರಣೆಯ ಜೊತೆಗೆ ತಾಯಂದಿರ ದಿನದ ಡಬಲ್ ಖುಷಿಯಲ್ಲಿದ್ದಾರೆ. 2017ರಲ್ಲಿ ನಿಶಾ ಎಂಬ ಹೆಣ್ಣು ಮಗುವನ್ನು ಸನ್ನಿ ದತ್ತು ಪಡೆದಿದ್ದರು. ನಂತರ 2018 ಮಾರ್ಚ್ ನಲ್ಲಿ ಬಾಡಿಗೆ ತಾಯ್ತನದ ಮೂಲಕ ಆಶೆರ್ ಸಿಂಗ್ ವೆಬರ್ ಮತ್ತು ನೋವಾ ಸಿಂಗ್ ಎಂಬ ಎರಡು ಅವಳಿ ಮಕ್ಕಳಿಗೆ ತಾಯಿಯಾದ್ರು.

ನನ್ನ ಹುಟ್ಟಿದ ದಿನಾಂಕ ನನಗೆ ಗೊತ್ತಿಲ್ಲ. ಆದ್ರೆ ಪ್ರತಿ ವರ್ಷ ದಾಖಲೆಯಲ್ಲಿರುವ ಮೇ 13ರಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೇನೆ. ಆದ್ರೆ ಈ ಬಾರಿ ಹುಟ್ಟುಹಬ್ಬದಂದು ತಾಯಂದಿರ ದಿನ ಬಂದಿದ್ದು ತುಂಬಾ ಖುಷಿಯನ್ನು ನೀಡಿದೆ. ಹಾಗಾಗಿ ಈ ಬಾರಿ ಹುಟ್ಟುಹಬ್ಬಕ್ಕಿಂತ ತಾಯಂದಿರ ದಿನವನ್ನು ಆಚರಿಸಲು ಇಷ್ಟಪಡುತ್ತೇನೆ. ಸದ್ಯ ತಾಯಿಯ ಜವಾಬ್ದಾರಿಗಳು ನನ್ನ ಮೇಲಿದ್ದು, ಮೂರು ಮಕ್ಕಳ ತಾಯಿ ಎಂಬ ಮಾತು ಯಾವಾಗಲೂ ನನ್ನ ಮನಸ್ಸಿನಲ್ಲಿರುತ್ತದೆ ಅಂತಾ ಸನ್ನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *