ಲಕ್ನೋ: ಮೃತ ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೂಸಂಬಿ ಜ್ಯೂಸ್ (Mosambi Juice) ನೀಡಿರಲಿಲ್ಲ, ಬದಲಿಗೆ ಕಳಪೆ ಮಟ್ಟದ ಪ್ಲೇಟ್‌ಲೆಟ್‌ಗಳನ್ನು ನೀಡಲಾಗಿದೆ ಎಂದು ಪ್ರಯಾಗ್‍ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ತಿಳಿಸಿದರು.
ಉತ್ತರ ಪ್ರದೇಶದ (Uttar Pradesh) ಪ್ರಯಾಗ್‍ರಾಜ್ ಖಾಸಗಿ ಆಸ್ಪತ್ರೆಯೊಂದು (Hospital) ಡೆಂಗ್ಯೂ ರೋಗಿಯೊಬ್ಬನಿಗೆ ಡ್ರಿಪ್‍ನಲ್ಲಿ ಪ್ಲೇಟ್‌ಲೆಟ್‌ಗಳು ಬದಲಿಗೆ ಮೂಸಂಬಿ ಹಣ್ಣಿನ ರಸವನ್ನು ಹಾಕಿದ್ದರಿಂದ ಆತ ಸಾವನ್ನಪ್ಪಿದ್ದ. ಈ ಘಟನೆ ಬೆನ್ನಲ್ಲೆ ಆ ಆಸ್ಪತ್ರೆಯನ್ನು ಅನಧಿಕೃತವಾಗಿ ನಿರ್ಮಿಸಿರುವುದಕ್ಕಾಗಿ ನೆಲಸಮ ಮಾಡುವುದಾಗಿ ಸರ್ಕಾರ ಆದೇಶಿಸಿತ್ತು.

ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಘಟನೆ ಸಂಬಂಧಿಸಿ ಪ್ರಯಾಗ್‍ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಆಸ್ಪತ್ರೆಯಿಂದ ಸಂಗ್ರಹಿಸಿದ ಮಾದರಿಯ ವರದಿ ಪ್ರಕಾರ ಅದು ಮೂಸಂಬಿ ರಸವಲ್ಲ ಬದಲಿಗೆ ಕಳಪೆ ಮಟ್ಟದ ಪ್ಲೇಟ್‌ಲೆಟ್‌ಗಳು ಎಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.
ವರದಿಗಳ ಪ್ರಕಾರ ಪ್ಲೇಟ್‍ಲೆಟ್‍ಗಳನ್ನು ಕಳಪೆ ಮಟ್ಟದಲ್ಲಿ ಸಂಗ್ರಹಿಸಲಾಗಿದೆ. ಅಷ್ಟೇ ಅಲ್ಲದೇ ಪ್ಲೇಟ್‍ಗಳು ಹೆಪ್ಪುಗಟ್ಟುವಿಕೆಯಿಂದಲೂ ಈ ಬಣ್ಣಕ್ಕೆ ತಿರುಗಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೊಸಂಬೆ ಜ್ಯೂಸ್ ನೀಡಿದ್ದ ಆಸ್ಪತ್ರೆಗೆ ಇದೀಗ ಬುಲ್ಡೋಜರ್ ಭಯ
ಕಳೆದ ವಾರ 32 ವರ್ಷದ ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ರಕ್ತದ ಪ್ಲೇಟ್‍ಲೆಟ್ ಬದಲಿಗೆ ಮೂಸಂಬಿ ಜ್ಯೂಸ್‍ನ್ನು ಹಾಕಿದ್ದರಿಂದ ಆತ ಸಾವನ್ನಪ್ಪಿದ್ದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅದಾದ ಬಳಿಕ ತನಿಖೆಗೂ ಆದೇಶಿಸಲಾಗಿತ್ತು. ಅದಾದ ಬಳಿಕ ಘಟನೆಗೆ ಸಂಬಂಧಸಿ 10 ಜನರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಘಟನೆಯಾದ ಬಳಿಕ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಅಲ್ಲಿ ಈಗ ಯಾವುದೇ ರೋಗಿಗಳಿಲ್ಲ. ಇದನ್ನೂ ಓದಿ: ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್, ಡೆಂಗ್ಯೂ ರೋಗಿ ಸಾವು – ತನಿಖೆಗೆ ಆದೇಶ

Leave a Reply