ಇಂಗ್ಲೆಂಡ್‍ನಲ್ಲಿ ನಕಲಿ ಮಾಡೋಕೆ ಸಾಧ್ಯವೇ ಇಲ್ಲದ ನೋಟು ಬಿಡುಗಡೆ!

ಲಂಡನ್: ಪ್ರಪಂಚದಲ್ಲಿ ಏನೇ ವಸ್ತುಗಳು ಬಂದ್ರೂ ನಕಲಿ ಆಗಿಬಿಡುತ್ತವೆ. ನಮ್ಮ ದೇಶದಲ್ಲಿ ಈ ಖೋಟಾ ನೋಟುಗಳೇ ದೊಡ್ಡ ಸಮಸ್ಯೆಯಾಗಿದೆ. ಆದರೆ ಬ್ರಿಟನ್‍ನಲ್ಲಿ ಜಗತ್ತಿನಲ್ಲೇ ನಕಲಿ ಮಾಡಲು ಸಾಧ್ಯವೇ ಇಲ್ಲದ ನೋಟನ್ನು ಹೊರ ತರಲಾಗಿದೆ.

19ನೇ ಶತಮಾನದ ಕಾದಂಬರಿಗಾರ್ತಿ ಜೇನ್ ಆಸ್ಟಿನ್ ಮುಖದೊಂದಿಗೆ ಪ್ರಿಂಟ್ ಆಗಿರುವ 10 ಹಾಗೂ 5 ಪೌಂಡ್ ಮೌಲ್ಯದ ಹೊಸ ನೋಟ್‍ನ್ನು ಹೊರ ತರಲಾಗಿದೆ.

ಏನಿದರ ವಿಶೇಷತೆ?
ಪಾಲಿಮರ್‍ನಿಂದ ಮಾಡಿರುವ ವಿಶೇಷ ನೋಟು ಇದಾಗಿದ್ದು ಪೇಪರ್‍ಗಿಂತ 2.5 ಪಟ್ಟು ಹೆಚ್ಚು ಬಾಳಿಕೆಗೆ ಯೋಗ್ಯವಾಗಿದೆ. ಎಡಬದಿಯ ಮೇಲ್ಭಾಗದಲ್ಲಿ ದೃಷ್ಟಿಹೀನರಿಗೆ ವಿಶೇಷ ಸ್ಪರ್ಶ ಇದರಲ್ಲಿದ್ದು ರಾಜಕಿರೀಟ ಮತ್ತು 10 ಎಂಬ ಎರಡು ಹಾಲೋಗ್ರಾಮ್ ಇದೆ. ಅಷ್ಟೇ ಅಲ್ಲದೇ ನೋಟನ್ನು ಓರೆ ಹಿಡಿದರೆ ಪೌಂಡ್ಸ್ ಎಂದು ಬದಲಾಗುತ್ತದೆ.

2ನೇ ರಾಣಿ ಎಲಿಜಬೆತ್ ಪಾರದರ್ಶಕ ಭಾವಚಿತ್ರ (ಮುಂಭಾಗದಲ್ಲಿ ಬಂಗಾರ, ಹಿಂಭಾಗದಲ್ಲಿ ಬೆಳ್ಳಿ ಲೇಪಿತ) ಇದೆ. ರಾಣಿ ಚಿತ್ರದ ಕೆಳಗೆ ಮೈಕ್ರೋಸ್ಕೋಪ್‍ನಿಂದ ನೋಡಿದರೆ ಅಕ್ಷರ ಮತ್ತು ಸಂಖ್ಯೆ ಕಾಣುತ್ತದೆ. ಈ ನೋಟು ಓರೆ ಮಾಡಿದರೆ ಹಕ್ಕಿಗರಿ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ.

Comments

Leave a Reply

Your email address will not be published. Required fields are marked *