ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೊಸ ಹೊಸ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಕಂಗನಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆಯವರ ಸಿನಿಮಾ ಪ್ರಚಾರ ಮಾಡಲು ಬಂದಿಲ್ಲ ಎಂದು ಪತ್ರಕರ್ತರಿಗೆ ತಿರುಗೇಟು ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಹೊಸ ರಿಯಾಲಿಟಿ ಶೋ ಲಾಕ್ ಅಪ್ ಪ್ರಚಾರ ಕಾರ್ಯಕ್ರಮದಲ್ಲಿ ಕಂಗನಾ ಪತ್ರಕರ್ತೆಯ ಮೇಲೆ ಕಿಡಿಕಾರಿದ್ದಾರೆ. ಪ್ರಭಾವಿ ಫ್ರೆಡ್ಡಿ ಬರ್ಡಿಯವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಗೆಹ್ರೈಯಾನ್ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ದೀಪಿಕಾ ಅವರ ಬಟ್ಟೆಗಳು ಚಿಕ್ಕದಾಗುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದರು. ಈ ಕುರಿತು ಕಂಗನಾ ಒಬ್ಬ ಮಹಿಳಾ ಸಬಲೀಕರಣ ಪ್ರತಿಪಾದಕರಾಗಿರುವುದನ್ನು ಪರಿಗಣಿಸಿ ಪತ್ರಕರ್ತೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್

ಈ ಪ್ರಶ್ನೆಗೆ ಕಂಗನಾ, ದೀಪಿಕಾ ಪಡುಕೋಣೆ ತನ್ನನ್ನು ತಾನು ಸಮರ್ಥಿಸಿಕೊಳ್ಳಬಲ್ಲಳು. ನಾನು ಇಲ್ಲಿ ಗೆಹ್ರೈಯಾನ್ ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.

ದೀಪಿಕಾ ಮುಗ್ಧಳಲ್ಲ ಅಂತ ಹೇಳಿ ಪತ್ರಕರ್ತೆಗೆ ನೀವು ನನ್ನ ಜೊತೆಗೆ ಹೊರಗೆ 45 ನಿಮಿಷಗಳ ಕಾಲ ಸಿಗಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಆದರೆ ಈವೆಂಟ್‍ನಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದರು.

ನೋಡಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದವರನ್ನು ರಕ್ಷಿಸಲು ನಾನು ಇಲ್ಲಿದ್ದೇನೆ ಸರಿ? ಅವಳು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲಳು. ದೀಪಿಕಾಗೆ ಅವಳದ್ದೇ ಆದ ಸವಲತ್ತು, ವೇದಿಕೆ ಇದೆ. ನಾನು ಅವರ ಚಲನಚಿತ್ರವನ್ನು ಇಲ್ಲಿ ಪ್ರಚಾರ ಮಾಡಲು ಬಂದಿಲ್ಲ ಕುಳಿತುಕೊಳ್ಳಿ ಎಂದು ಕಂಗನಾ ಪತ್ರಕರ್ತೆಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ

ಮುಂಬೈನ ಹೋಟೆಲ್‍ನಲ್ಲಿ ಕಂಗನಾ ರಣಾವತ್ ಮತ್ತು ಏಕ್ತಾ ಕಪೂರ್ ತಮ್ಮ ಹೊಸ ಶೋ ‘ಲಾಕ್ ಅಪ್’ ಅನ್ನು ಪ್ರಚಾರ ಮಾಡಲು ಬಂದಾಗ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *