ಬಾಗಲಕೋಟೆ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕೇವಲ ಗಾಂಧೀಜಿ, ನೆಹರೂಜಿ ಅವ್ರಿಂದಲ್ಲ, ಬಾಂಬ್-ಬಂದೂಕಿನಿಂದ ಸಿಕ್ಕಿದೆ. ಭಗತ್ ಸಿಂಗ್, ರಾಜ್‍ಗುರು, ಸುಖದೇವ, ಚಂದ್ರಶೇಕರ್ ಆಜಾದ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಅವರಂತಹ ಕಾಂತ್ರಿಕಾರಿಗಳಿಂದ ದೇಶ ಸ್ವಂತಂತ್ರವಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ವಿದ್ಯಾಗಿರಿಯ 17ನೇ ಕ್ರಾಸ್ ನಲ್ಲಿ, ಡೆಮಾಕ್ರೆಟಿಕ್ ಯೂತ್ ಸೇನಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಗತ್ ಸಿಂಗ್ ಬಲಿದಾನ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗತ್‍ಸಿಂಗ್ ಬಲಿದಾನ ದಿವಸ ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಿರುವ ಪಕ್ಷಕ್ಕೆ ನನ್ನ ಧಿಕ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಇಂತಹ ಕ್ರಾಂತಿಕಾರಿ ಬಲಿದಾನದ ಇವರ ಆಚರಣೆಗೆ ವಿರೋಧ ವ್ಯಕ್ತಪಡಿಸೋದು ದೇಶ ದ್ರೋಹ. ನನ್ನ ಮೇಲೆ 97 ಅಲ್ಲ 107 ಕೇಸ್ ದಾಖಲಾಗಿವೆ. ಇದಕ್ಕೆ ನಾನು ಹೆದರಲ್ಲ. ನನಗ್ಯಾಕೆ ತೊಂದರೆ ಕೊಡುತ್ತಿದ್ದೀರಿ. ನನಗೆ ಮದುವೆಯಿಲ್ಲ, ಮಕ್ಕಳಿಲ್ಲ, ಆಸ್ತಿ ಗಳಿಸಿಲ್ಲ. ಕ್ರಾಂತಿಕಾರಿಗಳ ಹೋರಾಟ, ತ್ಯಾಗವನ್ನು ವ್ಯವಸ್ಥಿತವಾಗಿ ಮುಚ್ಚುಹಾಕಲಾಗಿದೆ ಎಂದು ಗುಡುಗಿದ್ರು.
ನಮ್ಮ ದೇಶದಲ್ಲಿ ದೇಶಭಕ್ತರಿರಬಾರದು, ಅಂಜುಪುಕಲರು ಇರಬೇಕು. ಢರ್ಪೋಕ್ ಭಾರತೀಯರು, ಬ್ರಿಟಿಷರ ನೋಡಿ ಉಚ್ಚೆ ಹೊಯ್ಕೊಳ್ಳುವಂತಹ ವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ. ಇಂತಹ ಭಾರತೀಯರಿಗೆ ಧೈರ್ಯ ತುಂಬಲು ಭಗತ್ ಸಿಂಗ್ ಪಾರ್ಲಿಮೆಂಟ್‍ನಲ್ಲಿ ಬಾಂಬ್ ಹಾಕಿದ್ರು ಅಂತ ಮುತಾಲಿಕ್ ಹೇಳಿದ್ರು.


Leave a Reply