ಅಜ್ಮೇರ್ ಪ್ರವಾಸಕ್ಕೆ ರಾಜಕೀಯ ವ್ಯಾಖ್ಯಾನ ಬೇಡ-ಸಹೋದರನ ಪರ ಬ್ಯಾಟ್ ಬೀಸಿದ ರಮೇಶ್ ಜಾರಕಿಹೊಳಿ

ಬೆಳಗಾವಿ: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ಶಾಸಕರು ಅಜ್ಮೇರ್ ಪ್ರವಾಸಕ್ಕೆ ರಾಜಕೀಯ ವ್ಯಾಖ್ಯಾನ ಅವಶ್ಯಕತೆ ಇಲ್ಲ ಎಂದು ಸಹೋದರನ ಪರ ಶಾಸಕ ಸತೀಶ್ ಜಾರಕಿಹೊಳಿ ಬ್ಯಾಟ್ ಬೀಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಯಾವುದೇ ಗಂಪುಗಾರಿಕೆ ಬೆಳವಣಿಗೆ ಇಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಪ್ರವಾಸಕ್ಕೆ ಯಾವುದೇ ಮಹತ್ವ ಕೊಡಬೇಕಾಗಿಲ್ಲ. ನಾವು 6 ತಿಂಗಳಿಗೊಮ್ಮೆ ಶಾಸಕರ ಜೊತೆ ಪ್ರವಾಸ ಮಾಡುತ್ತೇವೆ. ಪ್ರತಿಯೊಂದಕ್ಕೂ ರಾಜಕೀಯ ಬೆರೆಸುವುದು ಸರಿಯಲ್ಲ. ನಮ್ಮದೇ ಆದ ಶಾಸಕರ ಗುಂಪುಗಳಿವೆ, ಹಾಗಂತ ಇದಕ್ಕೆ ರಾಜಕೀಯ ಥಳಕು ಹಾಕುವುದು ಸರಯಲ್ಲ ಎಂದು ಹೇಳಿದರು.

ಗ್ರಹಣದಲ್ಲಿ ಸಂದರ್ಭದಲ್ಲಿ ಎಚ್ಚರ ವಹಿಸುವಂತೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಯಾವುದು ಕೆಟ್ಟ ದಿನ ಅಂತ ಇರೋದಿಲ್ಲ. ಇಂತಹ ಮೂಢನಂಬಿಕೆ ವಿರುದ್ಧ ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

ಗ್ರಹಣ ಸಂದರ್ಭದಲ್ಲಿ ಊಟ, ತಿಂಡಿ ಮಾಡುವ ಮೂಲಕ ಜನಜಾಗೃತಿ ಮೂಡಿಸಿದ್ದೇವೆ. ಸಶ್ಮಾನದಲ್ಲಿ ಜಾಗರಣೆ ಮಾಡಿದ್ದೇವೆ. ಈಗಲೂ ಮಾನವ ಬಂಧುತ್ವ ವೇದಿಕೆಯು ಮೂಢನಂಬಿಕೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *