ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಮೂಲಭೂತ ಹಕ್ಕಲ್ಲ: ಅರ್ಜಿ ವಜಾ

LOUDSPEAKER

ಲಕ್ನೋ: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

2021ರ ಡಿಸೆಂಬರ್ 3ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ (SDM) ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಮುಸ್ಲಿಂ ಮುಖಂಡ ಇರ್ಫಾನ್ ಆಜಾನ್‌ಗಾಗಿ ಧೋರನ್‌ಪುರ ಗ್ರಾಮದ ನೂರಿ ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ಕೋರಿದ್ದರು. ಇದನ್ನೂ ಓದಿ: ಮೋದಿ ಏನೇ ಮಾಡಿದರೂ, ವಿಜ್ಞಾನ ಸುಳ್ಳು ಹೇಳುವುದಿಲ್ಲ: ರಾಹುಲ್ ಗಾಂಧಿ 

LOUDSPEAKER (1)

ನ್ಯಾಯಮೂರ್ತಿ ವಿವೇಕ್‌ಕುಮಾರ್ ಬಿರ್ಲಾ ಹಾಗೂ ನ್ಯಾಯಮೂರ್ತಿ ವಿಕಾಸ್ ಅವರಿದ್ದ ನ್ಯಾಯಪೀಠವು, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಸಾಂವಿಧಾನಿಕ ಹಕ್ಕಲ್ಲ ಎಂದು ಕಾನೂನು ಹೇಳುತ್ತದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರರು ತಮ್ಮ ಮನವಿಯಲ್ಲಿ, ಎಸ್‌ಡಿಎಂನ ಆದೇಶವು ಕಾನೂನುಬಾಹಿರ. ಇದು ಮೂಲಭೂತ ಮತ್ತು ಕಾನೂನು ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಉಲ್ಲೇಖಿಸಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಆರ್ಭಟ – GRPA ಆ್ಯಕ್ಷನ್ ಪ್ಲಾನ್‌ನಂತೆ ರೆಡ್‌ಅಲರ್ಟ್ ಘೋಷಣೆ

mosque-loudspeakers
ಸಾಂದರ್ಭಿಕ ಚಿತ್ರ

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯ ವಿಚಾರವಾಗಿ ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಕೊಂಡಿದೆ. ಈಚೆಗಷ್ಟೇ ಉತ್ತರ ಪ್ರದೇಶದಲ್ಲೂ ಸಹ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದ 17,000 ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಪ್ರಮಾಣವನ್ನು ಮಿತಗೊಳಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ಭಾರತದಲ್ಲಿ ಕೋವಿಡ್‌ನಿಂದ 47 ಲಕ್ಷ ಮಂದಿ ಸಾವು – WHO ವರದಿ

ಅನುಮತಿ ಪಡೆದ ಧ್ವನಿವರ್ಧಕಗಳನ್ನು ಮಾತ್ರವೇ ನಿಯಮಿತ ಶಬ್ಧದೊಂದಿಗೆ ಬಳಸುವಂತೆ ಸೂಚನೆ ನೀಡಿತ್ತು. ಇದರಿಂದ ಹಿಂದೂ-ಮುಸ್ಲಿಂ ದೇವಾಯಗಳಲ್ಲೂ ಪ್ರಸಾರವಾಗುತ್ತಿದ್ದ ಧಾರ್ಮಿಕ ಕೈಂಕರ್ಯಗಳು ಆವರಣಕ್ಕೆ ಮಾತ್ರ ಸೀಮಿತವಾಗಿತ್ತು.

Comments

Leave a Reply

Your email address will not be published. Required fields are marked *