ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

ಪ್ಯೊನ್ಗ್‌ಯಾಂಗ್: ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದಲ್ಲಿ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ತೀವ್ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ದೇಶಕ್ಕೆ ಇದುವರೆಗೆ ಕೋವಿಡ್ ಸಾಂಕ್ರಾಮಿಕ ರೋಗ ಪ್ರವೇಶಿಸಿಲ್ಲ ಎಂದು ಇದುವರೆಗೆ ಉತ್ತರ ಕೊರಿಯಾ ಪ್ರತಿಪಾದಿಸಿತ್ತು. ಆದರೆ ಇದೀಗ ಮೊದಲ ಬಾರಿಗೆ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಸೋಂಕು ನಿರ್ಮೂಲನೆ ಮಾಡಲು ಅಧ್ಯಕ್ಷ ಕಿಮ್ ಜಾಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ.

ರಾಜಧಾನಿಯಲ್ಲಿ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಉತ್ತರ ಕೊರಿಯಾದ ಸರ್ಕಾರಿ ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಇದನ್ನೂ ಓದಿ: ಅಸನಿ ಎಫೆಕ್ಟ್‌ನಿಂದ ಬಿಟ್ಟು ಬಿಡದೆ ಮಳೆ – ಡೆಂಗ್ಯೂ, ಮಲೇರಿಯಾ, ಗುನ್ಯಾ ಹೆಚ್ಚಳ ಭೀತಿ

ಕೊರೊನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತುರ್ತು ಸಭೆ ನಡೆಸಲಾಯಿತು. ಈ ವೇಳೆ ವೈರಸ್ ನಿಯಂತ್ರಣ ಮಾಡಲು ಗರಿಷ್ಠ ತುರ್ತು ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಕಿನ್ ಘೋಷಣೆ ಮಾಡಿದರು. ಅಲ್ಲದೆ ಅತ್ಯಂತ ಕಡಿಮೆ ಅವಧಿಯಲ್ಲೇ ಕೋವಿಡ್ 19 ವೈರಸ್ ಅನ್ನು ಹತ್ತಿಕ್ಕುವ ಗುರಿಯನ್ನು ಎಲ್ಲರೂ ಹೊಂದಿರಬೇಕು. ಕಟ್ಟುನಿಟ್ಟಿನ ಗಡಿ ನಿಯಂತ್ರಣಗಳ ಮತ್ತು ಲಾಕ್ ಡೌನ್ ಕ್ರಮಗಳನ್ನು ಜಾರಿಗೊಳಿಸುವಂತೆ ಕಿಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

Comments

Leave a Reply

Your email address will not be published. Required fields are marked *