ನಾನ್‌ವೆಜ್ ಪ್ರಿಯರೇ ಎಚ್ಚರ – ಬೆಂಗ್ಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್

ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್‌ಗಳಿಗೆ ಆಹಾರ ಸುರಕ್ಷತಾ ಇಲಾಖೆ (Department of Food Safety) ನೋಟಿಸ್ ನೀಡಿದ್ದು, ಹೋಟೆಲ್‌ನಲ್ಲಿ ತಯಾರಿಸಲಾಗುವ ಕಬಾಬ್ (Kabab) ಅನ್‌ಸೇಫ್ ಎಂದು ತಿಳಿದು ಬಂದಿದೆ.

ನಾನ್‌ವೆಜ್ ಪ್ರಿಯರೇ ಎಚ್ಚರವಾಗಿರಿ. ಬೆಂಗಳೂರಿನ ಆರು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ತಯಾರಾಗುವ ಕಬಾಬ್ ಅನ್‌ಸೇಫ್ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಆಹಾರ ಇಲಾಖೆ ಸುರಕ್ಷತಾ ಇಲಾಖೆ ಆರು ಹೋಟೆಲ್‌ಗಳಿಗೆ ನೋಟಿಸ್ ನೀಡಿದೆ.ಇದನ್ನೂ ಓದಿ: 12 ಮಹಡಿಯಿಂದ ಬಿದ್ದು 3 ವರ್ಷದ ಮಗು ಸಾವು

ಈ ಮೊದಲು ಶಿವಾಜಿನಗರ, ಬಸವನಗುಡಿ, ಮಹಾದೇವಪುರ, ಬೊಮ್ಮನಹಳ್ಳಿ, ಮಲ್ಲೇಶ್ವರಂ ಮತ್ತು ಹೆಬ್ಬಾಳದ ಆರು ಹೋಟೆಲ್‌ಗಳಿಂದ ಕಬಾಬ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಬಳಿಕ ಲ್ಯಾಬ್‌ನಿಂದ ವರದಿ ಬಂದಿದ್ದು, ಎಲ್ಲಾ ಹೋಟೆಲ್‌ಗಳಲ್ಲಿನ ಕಬಾಬ್ ಅನ್‌ಸೇಫ್ ಎಂದು ತಿಳಿದುಬಂದಿತ್ತು. ಕಬಾಬ್‌ಗೆ ಕಲರ್ ಬಳಕೆ ಹಾಗೂ ಕ್ಯಾನ್ಸರ್‌ಕಾರಕ ಸನ್‌ಸೆಟ್ ಯೆಲ್ಲೋ ಅಂಶ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಆಹಾರ ಸುರಕ್ಷತಾ ಇಲಾಖೆ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿತ್ತು. ಆದರೆ ಅಧಿಕಾರಿಗಳ ಎಚ್ಚರಿಕೆಗೂ ಕಿವಿಗೊಡದೆ ಅದನ್ನೇ ಮುಂದುವರಿಸಿದ್ದರು.

ಇದೀಗ ಆಹಾರ ಸುರಕ್ಷತಾ ಇಲಾಖೆ ಆರು ಹೋಟೆಲ್‌ಗಳಿಗೆ ನೋಟಿಸ್ ನೀಡಿದೆ.ಇದನ್ನೂ ಓದಿ:ಬಿಡುಗಡೆಗೂ ಮುನ್ನ ಓಂ ಸಾಯಿಪ್ರಕಾಶ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ