ಜಮ್ಮು, ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ- ಇಬ್ಬರು ಸ್ಥಳೀಯೇತರ ಕಾರ್ಮಿಕರು ಬಲಿ

ಶ್ರೀನಗರ: ಉಗ್ರರು ಸ್ಥಳೀಯರಲ್ಲದವರ ಮೇಲೆ ಗ್ರೆನೇಡ್ (Grenade) ಎಸೆದು ನಂತರ ಇಬ್ಬರು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶೋಪಿಯಾನ್ ಜಿಲ್ಲೆಯ ಹರ್ಮನ್ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಮನೀಶ್ ಕುಮಾರ್ ಹಾಗೂ ರಾಮ್ ಸಾಗರ್ ಎಂದು ಗುರುತಿಸಲಾಗಿದೆ. ಇಬ್ಬರೂ ಉತ್ತರ ಪ್ರದೇಶದ (Uttar Pradesh) ಕನೂಜ್ ಜಿಲ್ಲೆಯ ನಿವಾಸಿಗಳಾಗಿದ್ದು, ಜಮ್ಮು ಕಾಶ್ಮೀರಕ್ಕೆ ಕೆಲಸಕ್ಕೆಂದು ಬಂದಿದ್ದರು.

ಸುಮಾರು ಐವರು ಕಾರ್ಮಿಕರು ಟಿನ್ ಶೆಡ್‍ನಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ಉಗ್ರರು ಹ್ಯಾಂಡ್ ಗ್ರೆನೆಡ್‍ನ್ನು ಎಸೆದಿದ್ದಾರೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತಿಬ್ಬರಾದ ಮನೀಶ್ ಹಾಗೂ ರಾಮ್ ಸಾಗರ್ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿ ನಿಷೇಧಿತ ಉಗ್ರ ಸಂಘಟನೆಯ ಹೈಬ್ರಿಡ್ ಉಗ್ರ ಇಮ್ರಾನ್ ಬಶೀರ್ ಗನಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕಾಶ್ಮೀರದ ಎಡಿಜಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯ ಆಪ್ತ ಸಹಾಯಕನ ಮೇಲೆ ಹಲ್ಲೆ

ಶೋಪಿಯಾನ್ ಜಿಲ್ಲೆಯಲ್ಲಿ ಒಂದು ವಾರದಲ್ಲಿ ಹಿಂದೂಗಳ ಮೇಲೆ ಉಗ್ರರು ನಡೆಸಿದ ಎರಡನೇ ದಾಳಿ ಇದಾಗಿದೆ. ಶನಿವಾರ ಶೋಪಿಯಾನ್‍ನಲ್ಲಿ ಕಾಶ್ಮೀರಿ ಪಂಡಿತನನ್ನು ಗುಂಡಿಕ್ಕಿ ಕೊಂದಿದ್ದರು. ಇದನ್ನೂ ಓದಿ: ಬೆಂಗಳೂರು ಗುಂಡಿಗೆ ಮಹಿಳೆ ಬಲಿ – KSRTC ಡ್ರೈವರ್‌ ಅರೆಸ್ಟ್‌

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *