ಆ.28ಕ್ಕೆ ನೋಯ್ಡಾದ ಸೂಪರ್‌ಟೆಕ್‌ನ ಅವಳಿ ಟವರ್‌ ನೆಲಸಮ – ಅವಧಿ ವಿಸ್ತರಿಸಿದ ಸುಪ್ರೀಂ

ಲಕ್ನೋ: ನೋಯ್ಡಾದ ಸೂಪರ್‌ಟೆಕ್‌ನ ಅವಳಿ ಟವರ್‌ ಕಟ್ಟಡ ನೆಲಸಮದ ಅವಧಿ ವಿಸ್ತರಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

ನೋಯ್ಡಾದ ಅವಳಿ ಟವರ್‌ ಕಟ್ಟಡವನ್ನು ಆ.21 ನೆಲಸಮಗೊಳಿಸಲು ಸುಪ್ರೀಂ ಸೂಚಿಸಿತ್ತು. ಆದರೆ ಅವಧಿ ವಿಸ್ತರಣೆ ಕೋರಿ ನೋಯ್ಡಾ ಪ್ರಾಧಿಕಾರ ಮನವಿ ಸಲ್ಲಿಸಿತ್ತು. ಇದನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್‌ ಕಟ್ಟಡ ನೆಲಸಮ ದಿನಾಂಕವನ್ನು ಆ.28ಕ್ಕೆ ವಿಸ್ತರಿಸಿದೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ

ಯಾವುದೇ ತಾಂತ್ರಿಕ ದೋಷಗಳು ಹಾಗೂ ಹವಾಮಾನ ಸಂಬಂಧಿತ ಸಮಸ್ಯೆಗಳಾಗದಂತೆ ಆಗಸ್ಟ್‌ 29ರಿಂದ ಸೆ.4ರವರೆಗೆ ನೆಲಸಮ ಕಾರ್ಯಾಚರಣೆ ನಡೆಸಬೇಕು. ಸೆ.4ಕ್ಕೆ ಇದು ಮುಗಿಯಬೇಕು ಎಂದು ಸುಪ್ರೀಂ ಸೂಚಿಸಿದೆ.

ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 93ಬಿ ನಲ್ಲಿರುವ ಅವಳಿ ಗೋಪುರಗಳ ರಚನೆಯ ಒಳಗೆ ಸ್ಫೋಟಕಗಳನ್ನು ಹಾಕಿ ಕೆಡವಲು ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (CBRI) ಅನುಮೋದನೆಯೇ ಅಂತಿಮ. ಸುಮಾರು 100 ಮೀಟರ್ ಎತ್ತರದ ಅಕ್ರಮ ಕಟ್ಟಡಗಳನ್ನು ಆಗಸ್ಟ್ 21 ರಂದು ಮಧ್ಯಾಹ್ನ 2.30 ಕ್ಕೆ ನೆಲಸಮ ಮಾಡಲು ನಿರ್ಧರಿಸಲಾಗಿತ್ತು. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಬ್ರಾವೋ ವಿಶ್ವದಾಖಲೆ – ಫ್ರಾಂಚೈಸ್ ಲೀಗ್‍ನ ಬಾದ್‍ಶಾನಾಗಿ ಮೆರೆದಾಟ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *