4 ತಿಂಗಳ ಗರ್ಭಿಣಿಯನ್ನು 4ನೇ ಮಹಡಿಯಿಂದ ತಳ್ಳಿತು ದೆವ್ವ!

ನವದೆಹಲಿ: ದೆವ್ವರೂಪಿ ಪತಿಯೊಬ್ಬ ತನ್ನ 4 ತಿಂಗಳ ಗರ್ಭಿಣಿ ಪತ್ನಿಯನ್ನು ಕಡ್ಟಡದ 4ನೇ ಮಹಡಿಯಿಂದ ತಳ್ಳಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಫರಿ ಚೌಕಂಡಿ ನಿವಾಸಿಯಾಗಿರುವ ಅಮರ್ ಸಿಂಗ್(26) ಎಂಬಾತ ತನ್ನ ಗರ್ಭಿಣಿ ಪತ್ನಿ ಬಬಿತಾ ಜೊತೆ ಜಗಳವಾಡಿ ನಂತರ ಆಕೆಯನ್ನು ಕಟ್ಡಡದಿಂದ ಕೆಳಕ್ಕೆ ತಳ್ಳಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಬಿತಾ ತಲೆ, ಬೆನ್ನೆಲುಬು ತುಂಬಾ ಗಾಯಗಳಾಗಿವೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಶನಿವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ 4 ಗಂಟೆಗೆ ಬಬಿತಾ ಸಹೋದರ ಸತೀಂದರ್‍ಗೆ ಕರೆ ಮಾಡಿ ಅಮರ್ ಸಿಂಗ್ ದೆವ್ವವೊಂದು ಬಬಿತಾಳನ್ನು ಕಟ್ಟಡದಿಂದ ತಳ್ಳಿದೆ ಎಂದು ಕಟ್ಟು ಕತೆಯನ್ನು ಹೇಳಿದ್ದಾನೆ.

ಈ ವೇಳೆ ದೆವ್ವ ಅಂದ್ರೆ ಏನು ಎಂದು ಪ್ರಶ್ನಿಸಿದ್ದಕ್ಕೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಲೇ ಇದ್ದ ಎಂದು ಸತೀಂದರ್ ಹೇಳಿದ್ದಾರೆ. 2016 ರಲ್ಲಿ ಅಮರ್ ಸಿಂಗ್ ಹಾಗೂ ಬಬಿತಾ ಅವರಿಗೆ ಮದುವೆಯಾಗಿದ್ದು, ಅವರಿಗೆ 8 ತಿಂಗಳ ಮಗುವಿದೆ. ಆಕೆ ಮತ್ತೆ ಗರ್ಭಿಣಿಯಾಗಿದ್ದು, ಅಮರ್ ಸಿಂಗ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ಸತೀಂದರ್ ತಿಳಿಸಿದ್ದಾರೆ.

ಸತೀಂದರ್ ನೀಡಿದ ದೂರಿನ ಆಧಾರದಲ್ಲಿ ಅಮರ್ ಸಿಂಗ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಪೊಲೀಸ್ ಅಧಿಕಾರಿ ಜಹೀರ್ ಖಾನ್ ತಿಳಿಸಿದ್ದಾರೆ.

ಇದನ್ನೂ ಓದಿ:ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, SORRY ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!

Comments

Leave a Reply

Your email address will not be published. Required fields are marked *