ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

ಮಾಸ್ಕೋ: ಉಕ್ರೇನ್‌ ಮೇಲಿನ ರಷ್ಯಾ ಮಿಲಿಟರಿ ದಾಳಿಗೆ ರಷ್ಯನ್ನರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ರಷ್ಯಾದ ಅನೇಕ ಕಡೆಗಳಲ್ಲಿ ಯುದ್ಧ ವಿರೋಧಿಸಿ ಪ್ರತಿಭಟನೆ ನಡೆಯುತ್ತಿವೆ. ಅಂತೆಯೇ ಉಕ್ರೇನ್‌ ಮೇಲಿನ ಯುದ್ಧವನ್ನು ಖಂಡಿಸಿ ರಷ್ಯಾದ ಟೆನಿಸ್‌ ತಾರೆ ಆಂಡ್ರೆ ರುಬ್ಲೆವ್‌ ಸಂದೇಶವೊಂದನ್ನು ನೀಡಿದ್ದಾರೆ.

ರಷ್ಯಾದ ಟೆನಿಸ್‌ ತಾರೆ ಆಂಡ್ರೆ ರುಬ್ಲೆವ್‌ ಅವರು ಶುಕ್ರವಾರ ನಡೆದ ದುಬೈ ಟೆನಿಸ್‌ ಚಾಂಪಿಯನ್‌ಶಿಪ್‌ ಸೆಮಿ-ಫೈನಲ್‌ ಪಂದ್ಯ ವಿಜೇತರಾಗಿದ್ದಾರೆ. ಈ ವೇಳೆ ʼಯುದ್ಧ ಬೇಡʼ ಎಂದು ತನ್ನ ದೇಶಕ್ಕೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು – ಅಮೆರಿಕ ಆಫರ್ ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ

ʼದಯವಿಟ್ಟು ಯುದ್ಧ ಬೇಡʼ ಎಂದು ಹೇಳಿರುವ ಆಂಡ್ರೆ, ಉಕ್ರೇನ್‌ನಲ್ಲಿ ತನ್ನ ರಾಷ್ಟ್ರದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ತಮ್ಮ ಭಾವನೆಗಳನ್ನು ಸ್ಪಷ್ಟಪಡಿಸಿದ್ದಾರೆ. ಆಂಡ್ರೆ ತನ್ನ ನಿಲುವನ್ನು ಛಾಯಾಗ್ರಾಹಕರೊಬ್ಬರು ಹಿಡಿದಿದ್ದ ಕ್ಯಾಮೆರಾದ ಲೆನ್ಸ್‌ ಮೇಲೆ ಬರೆದಿದ್ದಾರೆ. ಈ ವೀಡಿಯೋವನ್ನು ಕೆನಡಾ ಸ್ಫೋರ್ಟ್ಸ್‌ ಲೀಡರ್‌ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿದೆ.

ಆಂಡ್ರೆ ರುಬ್ಲೆವ್‌ ಶುಕ್ರವಾರ ಸೆಮಿ-ಫೈನಲ್‌ ಪಂದ್ಯದಲ್ಲಿ ಹಬರ್ಟ್‌ ಹರ್ಕಾಜ್‌ ವಿರುದ್ಧ 3-6, 7-5, 7-6 (7/5) ಅಂತರದಲ್ಲಿ ಜಯಗಳಿಸಿದ್ದಾರೆ. ನಂತರ ದುಬೈನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಮತ್ತು ಏಕತೆಯನ್ನು ನಂಬಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ: ಉಕ್ರೇನ್‌, ರಷ್ಯಾಗೆ ತಾಲಿಬಾನ್‌ ಸಲಹೆ

ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ, ರುಬ್ಲೆವ್‌ ಎರಡೂ ರಾಷ್ಟ್ರಗಳ ಧ್ವಜಗಳ ಬಣ್ಣಗಳನ್ನು ಒಳಗೊಂಡಿರುವ ಫೀಚರ್‌ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

Comments

Leave a Reply

Your email address will not be published. Required fields are marked *