ಲಸಿಕೆ ಪಡೆಯದಿದ್ದರೆ ರೇಷನ್, ಗ್ಯಾಸ್‌, ಪೆಟ್ರೋಲ್‌ ಇಲ್ಲ

ಮುಂಬೈ: ಕೋವಿಡ್-‌19 ಲಸಿಕೆ ಪಡೆಯದೇ ಇರುವವರಿಗೆ ಪಡಿತರ, ಅಡುಗೆ ಅನಿಲ, ಪೆಟ್ರೋಲ್‌ ನೀಡುವುದಿಲ್ಲ ಎಂದು ಮಹರಾಷ್ಟ್ರದ ಔರಂಗಾಬಾದ್‌ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕನಿಷ್ಠ ಪಕ್ಷ ಒಂದು ಡೋಸ್‌ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಪಡಿತರ, ಅಡುಗೆ ಅನಿಲ, ಪೆಟ್ರೋಲ್‌ ಅನ್ನು ನೀಡುವಂತೆ ಸಂಬಂಧಪಟ್ಟ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿದೆ. ಕೋವಿಡ್‌ ಲಸಿಕೆ ನೀಡಿಕೆಯಲ್ಲಿ ಪ್ರಗತಿ ಸಾಧಿಸಿದ 36 ಜಿಲ್ಲೆಗಳ ಪೈಕಿ ಔರಂಗಾಬಾದ್‌ 26ನೇ ಸ್ಥಾನ ಪಡೆದಿದೆ. ಇದನ್ನೂ ಓದಿ: ಜೈಲಿನಿಂದ ರಿಲೀಸ್ ಬಳಿಕ ಫಸ್ಟ್ ಟೈಂ ಪತ್ನಿ ಜೊತೆ ಕಾಣಿಸಿಕೊಂಡ ರಾಜ್ ಕುಂದ್ರಾ

ಈ ಆದೇಶವು ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ. ನ್ಯಾಯ ಬೆಲೆ ಅಂಗಡಿ, ಗ್ಯಾಸ್‌ ಸಂಸ್ಥೆಗಳು ಹಾಗೂ ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರು ಕೋವಿಡ್‌ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಪರಿಶೀಲಿಸಿ ನಂತರ ನೀಡಬೇಕು ಎಂದು ಮಾಲೀಕರಿಗೆ ಜಿಲ್ಲಾಧಿಕಾರಿ ಸುನಿಲ್‌ ಛವಾನ್‌ ನಿರ್ದೇಶನ ನೀಡಿದ್ದಾರೆ. ಆದೇಶ ಪಾಲನೆಯಾಗದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಕೋವಿಡ್‌ ಲಸಿಕೆ ಪಡೆಯದಿದ್ದರೆ ಐತಿಹಾಸಿಕ ತಾಣಗಳಿಗೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವುದಿಲ್ಲ ಎಂದು ಈ ಹಿಂದೆಯೂ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದನ್ನೂ ಓದಿ: ಹಣದಾಸೆಗೆ ವೃದ್ಧ ದಂಪತಿಯನ್ನು ಹತ್ಯೆಗೈದು ಮನೆಯೆಲ್ಲಾ ಹುಡುಕಿದ್ರು- ಆದ್ರೆ ಸಿಕ್ಕಿದ್ದು ಕೇವಲ 500 ರೂ!

ಎಷ್ಟೋ ಮಂದಿ ಬೆಳಿಗ್ಗೆಯಿಂದ ಸಂಜೆವರೆಗೂ ಜಮೀನುಗಳಲ್ಲಿ ಕೆಲಸ ಮಾಡುವವರಿದ್ದಾರೆ. ಅಂತಹವರಿಗೆ ಸಂಜೆ 5ರಿಂದ ರಾತ್ರಿ 8 ಗಂಟೆವರೆಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಪರಿಷತ್‌ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಈವರೆಗೆ ಶೇ. 74ರಷ್ಟು ಲಸಿಕೆ ನೀಡಲಾಗಿದ್ದು, ಔರಂಗಾಬಾದ್‌ ಜಿಲ್ಲೆಯಲ್ಲಿ ಶೇ. 55 ಆಗಿದೆ.

Comments

Leave a Reply

Your email address will not be published. Required fields are marked *