‘ನೋ ಸ್ಮೋಕಿಂಗ್’ ಎನ್ನುತ್ತಲೇ ಸ್ಯಾಂಡಲ್ ವುಡ್‍ಗೆ ಕಾಲಿಟ್ಟ ವಿದ್ಯಾರ್ಥಿನಿ!

ಬೆಂಗಳೂರು: ಯಾವುದೇ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲು ಹೋದಾಗ ನೋ ಸ್ಮೋಕಿಂಗ್ ಎಂಬ ಜಾಹೀರಾತು ಬರುತ್ತದೆ. ಆ ಜಾಹಿರಾತಿನಲ್ಲಿ ಕಾಣಿಸಿಕೊಂಡ ಆ ಪುಟ್ಟ ಪೋರಿ ಈಗ ಬೆಳೆದು ಸ್ಯಾಂಡಲ್ ವುಡ್‍ನಲ್ಲಿ ನಟಿ ಆಗಿ ಮಿಂಚಲು ಸಿದ್ಧರಾಗಿದ್ದಾರೆ.

ಚಿತ್ರಮಂದಿರಗಳಲ್ಲಿ ಧೂಮಪಾನದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಸಿಮ್ರಾನ್‍ಗೆ ಬಾಲಿವುಡ್‍ನಿಂದ ಸಾಕಷ್ಟು ಅವಕಾಶಗಳು ಬರುತ್ತಿದ್ದರೂ ಕನ್ನಡ ಸಿನಿಮಾದಲ್ಲೇ ನಟಿಸಲು ಮುಂದಾಗಿದ್ದಾರೆ.

‘ಕಾಜಲ್’ ಸಿನಿಮಾದ ನಿರ್ದೇಶಕ ಸುಮಂತ್ ಕ್ರಾಂತಿ ಅವರು ಸಿಮ್ರಾನ್ ಅವರನ್ನು ಕರೆತಂದಿದ್ದಾರೆ. ಈ ಹಿಂದೆ ಸುಮಂತ್ ಕ್ರಾಂತಿ ‘ನಾನಿ’ ಸಿನಿಮಾ ಹಾಗೂ ಈಗ ವಸಿಷ್ಠ ಸಿಂಹ ನಟಿಸುತ್ತಿರುವ ‘ಕಾಲಚಕ್ರ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಗಣಪ ಹಾಗೂ ಕರಿಯ-2 ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಂತೋಷ್ ‘ಕಾಜಲ್’ ಚಿತ್ರಕ್ಕೂ ನಾಯಕರಾಗಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರಕ್ಕೆ ಆನೇಕಲ್ ಬಾಲರಾಜ್ ಬಂಡವಾಳ ಹೂಡಿದ್ದಾರೆ.

ಸಿಮ್ರಾನ್ ಅವರ ತಂದೆ ಮುಂಬೈನ ಖಾಸಗಿ ಹೋಟಲ್ ನ ಮ್ಯಾನೇಜರ್ ಆಗಿದ್ದಾರೆ. ಬಾಲ್ಯದಿಂದಲೇ ಸಿಮ್ರಾನ್ ಜಾಹೀರಾತಿನಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರದ ಸ್ಮೋಕಿಂಗ್ ಕಿಲ್ಸ್ ಜಾಹೀರಾತಿನಿಂದ ದೇಶ್ಯಾದ್ಯಂತ ಜನಪ್ರಿಯರಾಗಿದ್ದರು. ಸದ್ಯ ಸಿಮ್ರಾನ್ ಈಗ ಹತ್ತನೇ ತರಗತಿ ಓದುತ್ತಿದ್ದಾರೆ.

 

ಸಿಮ್ರಾನ್ ಈಗ ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದು, ಬಾಲಿವುಡ್‍ನಿಂದಲ್ಲೂ ಸಾಕಷ್ಟು ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಆದರೆ ಕಥೆ ಇಷ್ಟವಾಗದ ಕಾರಣ ಸಿಮ್ರಾನ್ ಆ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಸಿಮ್ರಾನ್ ಈ ಹಿಂದೆ ಬಾಲನಟಿಯಾಗಿ ಸಿನಿಮಾಗಳಲ್ಲಿ ನಟಿಸಿದ್ದು, ಆದರೆ ಈಗ ‘ಕಾಜಲ್’ ಸಿನಿಮಾ ಮೂಲಕ ನಟಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದಾರೆ.

‘ಕಾಜಲ್’ ಚಿತ್ರದ ಫಸ್ಟ್ ಲುಕ್ ಇದೇ ತಿಂಗಳು 31 ಚಿತ್ರದ ನಾಯಕ ಸಂತೋಷ್ ಹುಟ್ಟುಹಬ್ಬದಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *