ಬೆಂಗ್ಳೂರು ಬನಶಂಕರಿ ದೇಗುಲದಲ್ಲಿಲ್ಲ ಸಂಕ್ರಾಂತಿ – ಅರ್ಚಕರ ಸಾವಿನಿಂದ ಸೂತಕದ ಛಾಯೆ

ಬೆಂಗಳೂರು: ನಗರದ ಬನಶಂಕರಿ ದೇಗುಲದಲ್ಲಿ ಈ ಬಾರಿ ಸಂಕ್ರಾಂತಿ ಸಂಭ್ರಮವಿಲ್ಲ. ಯಾಕಂದ್ರೆ ದೇವಳದ ಮುಖ್ಯ ಅರ್ಚಕರ ಅಕಾಲಿಕ ಸಾವಿನಿಂದ ಬನಶಂಕರಿ ದೇಗುಲದಲ್ಲಿ ಸೂತಕದ ಛಾಯೆ ಆವರಿಸಿದೆ.

ಹೃದಯಾಘಾತದಿಂದ ಭಾನುವಾರ ರಾತ್ರಿ ಪ್ರಧಾನ ಅರ್ಚಕ ಸೂರ್ಯ ಪ್ರಕಾಶ್ ಮೃತಪಟ್ಟಿದ್ದಾರೆ. ನಿನ್ನೆ ಪೂಜೆ ಮುಗಿಸಿ ಮನೆಗೆ ಮರಳಿದ ನಂತರ ಸೂರ್ಯಪ್ರಕಾಶ್ ಅವರಿಗೆ ಹೃದಯಾಘಾತವಾಗಿದೆ. ಹೀಗಾಗಿ ಈ ಸೂತಕದಿಂದಾಗಿ ಹಬ್ಬದ ದಿನವೇ ಬನಶಂಕರಿ ದೇಗುಲ ಬಂದ್ ಆಗಿದೆ.

ಈ ಬಗ್ಗೆ ಮಾಹಿತಿ ತಿಳಿಯದ ಭಕ್ತರು ಹಬ್ಬದ ನಿಮಿತ್ತ ದೇವಸ್ಥಾನಕ್ಕೆ ಬಂದು ವಾಪಾಸ್ಸಾಗುತ್ತಿದ್ದಾರೆ.

Comments

Leave a Reply

Your email address will not be published. Required fields are marked *