ಬೀದರ್: ಬ್ರಿಮ್ಸ್ (BRIMS) ಆಸ್ಪತ್ರೆಯಲ್ಲಿ ಕಳೆದ 7-8 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ವೈದ್ಯರಿಗೆ ಕಳೆದ 9 ತಿಂಗಳಿನಿಂದ ಸಂಬಳ ನೀಡಿಲ್ಲ, ಇದೀಗ ನೋಟಿಸ್ ನೀಡದೇ ಏಕಾಏಕಿ ವಜಾಗೊಳಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಗುತ್ತಿಗೆ ವೈದ್ಯರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕೆಲಸ ಮಾಡಿದ್ದರು. ಅದರಂತೆ ಪ್ರತಿ ವರ್ಷವೂ ಅವರ ಗುತ್ತಿಗೆ ಮುಗಿದ ಮೇಲೆ ಮತ್ತೆ ಗುತ್ತಿಗೆಯನ್ನು ಎಂದಿನಂತೆ ಮುಂದುವರಿಸುತ್ತಿದ್ದರು. ಆದರೆ ಈ ಬಾರಿ 9 ತಿಂಗಳ ಸಂಬಳವನ್ನೂ ನೀಡದೇ ಏಕಾಏಕಿ 40 ವೈದ್ಯರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ವೈದ್ಯರು ಅಕ್ಷರಶಃ ಕಂಗಾಲಾಗಿದ್ದಾರೆ.ಇದನ್ನೂ ಓದಿ: Dharmasthala Case | ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ, ಈ ತಿಂಗಳೊಳಗೆ ವರದಿ: ಪರಮೇಶ್ವರ್
ಈಗಾಗಲೇ ಕೆಲವು ವೈದ್ಯರು ಕರ್ತವ್ಯ ಬಿಡುಗಡೆ ಪತ್ರ ತೆಗೆದುಕೊಂಡಿದ್ದು, ಇನ್ನೂ ಕೆಲ ವೈದ್ಯರು ಬಿಡುಗಡೆ ಪತ್ರ ತೆಗೆದುಕೊಳ್ಳದೇ ಬ್ರಿಮ್ಸ್ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಮ್ಮಗೆ ಬರೋಬ್ಬರಿ 9 ತಿಂಗಳಿಂದ ಸಂಬಳ ನೀಡಿಲ್ಲ, ಜೊತೆಗೆ ಈಗ ಯಾರಿಗೂ ಹೇಳದೇ, ಕೇಳದೇ ನಮ್ಮನ್ನ ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ವೈದ್ಯರು ಕಿಡಿಕಾರಿದ್ದಾರೆ.ಇದನ್ನೂ ಓದಿ: ದೆಹಲಿಯಿಂದ ಬರಿಗೈಯಲ್ಲಿ ಬೆಂಗಳೂರಿಗೆ ಡಿಕೆಶಿ ವಾಪಸ್
