ನನ್ನನ್ನು ಯಾರು ಏನು ಮಾಡೋಕಾಗಲ್ಲ: ಜಗಳೂರು ಶಾಸಕ ರಾಮಚಂದ್ರ

-ನಾನು ಇಟ್ಟರೆ ಒಂದೇ ಬಾಣ ಕೊಟ್ಟರೆ ಒಂದೇ ಮಾತು

ದಾವಣಗೆರೆ: ನನ್ನ ಜಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ನನಗೆ ಹಿಂಸೆ ನೀಡಿದ್ದಾರೆ. ಆದರೆ ಜನರು ಹಾಗೂ ನಾಯಕ ಸಮಾಜ ನನ್ನ ಜೊತೆ ಇರುವವರೆಗೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಭಾವುಕರಾಗಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ನಾಯಕ ಸಮಾಜದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ನನ್ನ ಜಾತಿ ವಿಚಾರವನ್ನ ಮುಂದಿಟ್ಟುಕೊಂಡು ನಮ್ಮವರೆ ಕೆಲವರು ಕೋರ್ಟ್ ಅಲೆದಾಡಿಸಿದ್ದಾರೆ. ಈ ವೇಳೆ ಎರಡು ಬಾರಿ ಗೆದ್ದು ಬಂದಿದ್ದೇನೆ. ಈಗ ಮತ್ತೆ ನನ್ನನ್ನ ಹಿಂಸಿಸುತ್ತಿದ್ದಾರೆ. ಮುಂದಿನ ಬಾರಿಯೂ ನಾನು ಗೆದ್ದು ಬಂದೇ ಬರುತ್ತೇನೆ ಎಂದು ಗುಡುಗಿದರು.

ನಾನು ರಾಮಚಂದ್ರ ನನ್ನ ಹೆಸರಿನಲ್ಲಿ ರಾಮ ಇದ್ದಾನೆ, ನಾನು ಇಟ್ಟರೆ ಒಂದೇ ಬಾಣ ಕೊಟ್ಟರೆ ಒಂದೇ ಮಾತು, ನೀವು ಇರೋವರೆಗೆ ನನ್ನ ಮೈ ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಹೆಚ್ ಪಿ ರಾಜೇಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *