ಬುದ್ಧಿ ಜೀವಿಗಳಿಗೆ ರಕ್ಷಣೆ ನೀಡೋ ಅಗತ್ಯವಿಲ್ಲ, ಅವರು ಸರಿ ಇದ್ರೆ ಭಯ ಯಾಕೆ: ಯತ್ನಾಳ್ ಪ್ರಶ್ನೆ

ವಿಜಯಪುರ: ಭಗವಾನ್ ಒಬ್ಬ ಚಿಲ್ಲರೆ ವ್ಯಕ್ತಿ. ಅವರು ಎಷ್ಟು ಚಿಲ್ಲರೆ ವ್ಯಕ್ತಿ ಎಂಬುವುದನ್ನು ಎಲ್ಲರಿಗೂ ಗೊತ್ತಿದೆ. ಅವರಿಗೆ ಯಾವುದೇ ರಕ್ಷಣೆ ನೀಡುವುದು ಸರಿಯಲ್ಲ. ಆದರೆ ನಾವು ದೇಶದ ಬಗ್ಗೆ ಮಾತನಾಡಿದರೆ ವಿವಾದತ್ಮಾಕ ಹೇಳಿಕೆ ಎಂದು ಹೇಳುತ್ತೀರಿ. ದೇಶದ ವಿರುದ್ಧ ಮಾತನಾಡುವವರಿಗೆ ಹೆಚ್ಚಿನ ಪ್ರಚಾರ ನೀಡಲಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಗರದಲ್ಲಿ ಇಂದು ಮಾತನಾಡಿದ ಅವರು, ಬುದ್ಧಿ ಜೀವಿಗಳಿಗೆ ರಕ್ಷಣೆ ನೀಡುವ ಅಗತ್ಯವಿಲ್ಲ. ಅವರು ಸರಿಯಾಗಿದ್ದರೆ ಅವರಿ ಏಕೆ ಭಯ ಕಾಡುತ್ತದೆ? ಅವರು ದೇಶದ ವಿರುದ್ಧ ನೀಡುವ ಹೇಳಿಕೆಗಳಿಂದ ಕೆಲವು ಅಹಿತಕರ ಘಟನೆಗಳು ನಡೆಯುತ್ತವೆ. ಪ್ರಚಾರಕ್ಕಾಗಿ ಮಾತ್ರ ಅವರು ಈ ಹೇಳಿಕೆ ನೀಡುತ್ತಾರೆ ಎಂದು ಹೇಳಿದರು.

ಇದೇ ವೇಳೆ ನಾನು ಯಾವುದೇ ವಿವಾದತ್ಮಾಕ ಹೇಳಿಕೆ ನೀಡಿಲ್ಲ ಎಂದು ಸಮರ್ಥನೆ ನೀಡಿದ ಅವರು, ನನ್ನ ಹೇಳಿಕೆಯನ್ನು ತಪ್ಪಾಗಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಹಿಂದೂಗಳ ಶೋಷಣೆ ನಡೆಯುತ್ತಿದೆ. ಮಾಜಿ ಸಚಿವ ಎಂಬಿ ಪಾಟೀಲ್ ಅವರು ಹಿಂದೂಗಳ ಬಗ್ಗೆಯೂ ಮಾತನಾಡುವುದನ್ನು ಕಲಿಯಲಿ ಎಂದರು.

ಸಿದ್ದರಾಮಯ್ಯ ಸ್ವಾಭಿಮಾನಿ: ಇದೇ ವೇಳೆ ಸಮ್ಮಿಶ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇನ್ನು 3 ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ತನಗೆ ತಾನೇ ಪತನವಾಗುತ್ತದೆ. ಸಿಎಂ ಹಾಗೂ ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯದ ನಾಯಕರಾಗಿದ್ದು, ಸ್ವಾಭಿಮಾನಿಗಳು. ಅದ್ದರಿಂದ ಅವರೇ ಸರ್ಕಾರ ವಿರುದ್ಧ ಬಂಡಾಯ ಎದ್ದು ಸರ್ಕಾರದ ಕೆಡವಲಿದ್ದಾರೆ. ನಾನು ನಿಜವನ್ನೇ ಹೇಳುತ್ತೇನೆ. ಬಿಎಸ್ ಯಡಿಯೂರಪ್ಪ ಮುಂದಿನ ಸಿಎಂ ಆಗಲಿದ್ದು, 5 ವರ್ಷ ಆಡಳಿತ ನಡೆಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಇದನ್ನು ಓದಿ:  ಪಿತೂರಿ ಮಾಡಿ ಸ್ವಾಮಿ ವಿವೇಕಾನಂದ, ಬಸವಣ್ಣರ ಕೊಲೆ : ಕೆ.ಎಸ್ ಭಗವಾನ್ 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *