ರಾಜ್ಯಸರ್ಕಾರದ ಇಲಾಖೆಗಳಲ್ಲಿ ಕನ್ನಡವೇ ಮಾಯ- ರಾಜ್ಯಪಾಲರಿಗಂತೂ ಬೇಡ್ವೇ ಬೇಡ ಕನ್ನಡ

ಬೆಂಗಳೂರು: ನಮ್ಮದು ಕನ್ನಡಿಗರ ಪರವಾದ ಸರ್ಕಾರ. ಕನ್ನಡಕ್ಕೆ ನಮ್ಮ ಮೊದಲ ಆದ್ಯತೆ ಅನ್ನೋ ಸಿಎಂ ಸಿದ್ದರಾಮಯ್ಯರ ಅಸಲಿ ಕನ್ನಡ ಪ್ರೇಮದ ಸ್ಟೋರಿ ಇದು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಸಿಎಂ ಆಗಿ ನಾಲ್ಕೂವರೆ ವರ್ಷ ಕಳೆದ್ರೂ ಅವರ ಅಧೀನದ ಪ್ರಭಾವಿ ಇಲಾಖೆಗಳಲ್ಲಿ ಮಾತ್ರ ಕನ್ನಡದ ಅನುಷ್ಠಾನ ಆಗಿಲ್ಲ.

ಸುಮಾರು 15ಕ್ಕೂ ಹೆಚ್ಚು ಇಲಾಖೆಗಳ ವೆಬ್‍ಸೈಟ್‍ಗಳು ಈಗಲೂ ಇಂಗ್ಲೀಷ್‍ನಲ್ಲಿವೆ. ಕೇವಲ ಇಲಾಖೆಗಳ ವೆಬ್ ಸೈಟ್ ಮಾತ್ರವಲ್ಲ. ರಾಜ್ಯದ ಮೊದಲ ಪ್ರಜೆ ಘನವೆತ್ತ ರಾಜ್ಯಪಾಲರಾದ ಅಧಿಕೃತ ವೆಬ್‍ಸೈಟ್ ಕೂಡಾ ಕನ್ನಡದಲ್ಲಿ ಇಲ್ಲ. ಬೇರೆ ರಾಜ್ಯದ ವೆಬ್ ಸೈಟ್‍ನಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ಮಾತ್ರ ಕನ್ನಡಕ್ಕೆ ಕೊಕ್ ಕೊಟ್ಟಿದ್ದಾರೆ.

ಹೀಗಾಗಿ ಮೆಟ್ರೋ ನಿಲ್ದಾಣಕ್ಕೆ ಕನ್ನಡ ಹೆಸ್ರು ಇಡಲು ಪತ್ರ ಬರೆಯೋ ಸಿಎಂ ಸಾಹೇಬ್ರು ಅವರ ಇಲಾಖೆಗಳತ್ತಲೂ ಒಮ್ಮೆ ಗಮನಹರಿಸಲಿ.

ಇದನ್ನೂ ಓದಿ:  ನಮ್ಮ ಮೆಟ್ರೋದಲ್ಲಿ ಹಿಂದಿ ಬಳಸಲ್ಲ- ಮೋದಿ ಸರ್ಕಾರಕ್ಕೆ ಸಿಎಂ ಪತ್ರ

 

Comments

Leave a Reply

Your email address will not be published. Required fields are marked *