ಡೆಡ್ಲಿ ಬಿಎಂಟಿಸಿ, ಇವರಿಗೆ ನೋ ರೂಲ್ಸ್ – ಸೆಸ್ ವಿಧಿಸೋ ಸಚಿವರೇ ಒಮ್ಮೆ ಇಲ್ನೋಡಿ

ಬೆಂಗಳೂರು: ನಗರದಲ್ಲಿ ಸಂಚರಿಸುತ್ತಿರೋ ಬಿಎಂಟಿಸಿ ಬಸ್ ಗಳಿಗೆ ಇನ್ಶೂರೆನ್ಸ್ ಇಲ್ಲ. ಡ್ರೈವರ್‍ಗೆ ಡಿಎಲ್ ಕೂಡ ಇಲ್ಲ ಅನ್ನೋ ಸ್ಫೋಟಕ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ.

ಈ ಕುರಿತು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ್ದು, ಈ ವೇಳೆ ರಾಷ್ಟ್ರೀಯ ಮಟ್ಟದಲ್ಲಿ ಸೇಫ್ಟಿ ಅವಾರ್ಡ್ ಪಡೆದ ಬಿಎಂಟಿಸಿಯ ಕರಾಳತನ ಬಯಲಾಗಿದೆ. ಹೌದು. ಬಿಎಂಟಿಸಿ ಬಸ್ ಡ್ರೈವರ್ಸ್ ಬಳಿ ಆರ್ ಸಿ ಬುಕ್, ಡಿಎಲ್ ಏನೂ ಇರಲ್ಲ. ಅಧಿಕಾರಿಗಳು ಲೂಟಿ ಹೊಡೆಯೋಕೆ ಗಾಡಿ ಇನ್ಶೂರೆನ್ಸ್ ಮಾಡಿಕೊಂಡಿಲ್ವಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

ಈ ನಷ್ಟ ಕಣ್ಣಿಗೆ ಕಾಣದೆ ನಮ್ಮ ಮಿನಿಸ್ಟರ್ ಸಾಹೇಬ್ರು ಸೆಸ್ ವಿಧಿಸೋಕೆ ಹೋಗಿದ್ದಾರೆ. ನಮ್ಮದು ಸರ್ಕಾರಿ ಬಸ್, ಇದೆಲ್ಲ ಯಾಕ್ ಸ್ವಾಮಿ ಅಂತ ಕೆಲ ಡ್ರೈವರ್ ಗಳು ಹೇಳುತ್ತಾರೆ. ಇನ್ನು ಕೆಲವರು ಅದೆಲ್ಲ ಇಟ್ಕೊಳ್ಳೋಕೆ ಜಾಗ ಇಲ್ಲ ಬಿಡ್ರೀ ಅಂತಾ ಕಳ್ಳ ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ.

ನಿತ್ಯ ಸಾವಿರಾರು ಜನ ಪ್ರಯಾಣಿಸೋ ಬಿಎಂಟಿಸಿಗಿಲ್ಲ ಸಾರಿಗೆ ಕಾಯ್ದೆ. ಡಿಎಲ್ ಇಲ್ಲದೇ ಇದ್ರೆ, ವಾಹನ ವಿಮೆ ಕಟ್ಟದಿದ್ರೆ ಜನಸಾಮಾನ್ಯರಿಗೆ ಫೈನ್ ಹಾಕ್ತಾರೆ. ಆದ್ರೆ ಸರ್ಕಾರಿ ಸಾರಿಗೆ ವ್ಯವಸ್ಥೆಗೆ ಮಾತ್ರ ಈ ಕಾನೂನು ಅನ್ವಯವಾಗೋದೆ ಇಲ್ವಾ ಅನ್ನೋ ಪ್ರಶ್ನೆಯೊಂದು ವಾಹನ ಸವಾರರನ್ನು ಕಾಡಿದೆ.

Comments

Leave a Reply

Your email address will not be published. Required fields are marked *