ಹೊರಗಡೆ ಬರಬೇಡಿ, ಮನೆಯಲ್ಲಿರಿ – ಜನರಲ್ಲಿ ಕೇಂದ್ರ ಮನವಿ

– 65 ವರ್ಷ ಮೇಲ್ಪಟ್ಟವರು, 10 ವರ್ಷದ ಒಳಗಿನವರು ಮನೆಯಲ್ಲಿರಲಿ
– ಮನೆಯಿಂದಲೇ ಕರ್ತವ್ಯ ನಿರ್ವಹಿಸಿ

ನವದೆಹಲಿ: ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು 10 ವರ್ಷದ ಒಳಗಿನ ಮಕ್ಕಳು ಮನೆಯಲ್ಲಿರುವಂತೆ ಜನರಲ್ಲಿ ಮನವಿ ಮಾಡಿದೆ.

ಸಾರ್ವಜನಿಕ ಪ್ರತಿನಿಧಿಗಳು, ಸರ್ಕಾರಿ ಸಿಬ್ಬಂದಿ, ಮೆಡಿಕಲ್ ಸಿಬ್ಬಂದಿ, ಅಗತ್ಯ ವಸ್ತುಗಳನ್ನು ಪೂರೈಸುವ ಮಂದಿ ಹೊರತು ಪಡಿಸಿ ಉಳಿದವರು ಮನೆಯಲ್ಲಿರಬೇಕು. ಕೇಂದ್ರ ಸರ್ಕಾರದ ನೌಕರರು ರೊಟೆಷನ್ ಆಧಾರದಲ್ಲಿ ಪಾಳಿಗೆ ಬರಬೇಕು. ರಾಜ್ಯ ಸರ್ಕಾರಗಳು ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ನಿರ್ದೇಶಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಮಾರ್ಚ್ 22 ರಿಂದ ಒಂದು ವಾರ ಯಾವುದೇ ಅಂತಾರಾಷ್ಟ್ರೀಯ ಕಂಪನಿಯ ವಿಮಾನ ಭಾರತದಲ್ಲಿ ಲ್ಯಾಂಡ್ ಆಗಲು ಅನುಮತಿ ನೀಡುವುದಿಲ್ಲ ತಿಳಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ ದೇಶದಲ್ಲಿ 142 ಮಂದಿ ಭಾರತೀಯರು 25 ವಿದೇಶಿ ಪ್ರವಾಸಿಗರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಇದುವರೆಗೂ 15 ಮಂದಿ ಸಂಪೂರ್ಣ ಗುಣ ಮುಖರಾಗಿದ್ದಾರೆ.  ಕರ್ನಾಟಕದಲ್ಲಿ 14 ಮಂದಿಯಲ್ಲಿ ವೈರಸ್ ಸೋಂಕು ದೃಢಪಟ್ಟಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *