ನಂದಿಬೆಟ್ಟಕ್ಕೆ ಸಿಂಗಲ್ ಆಗಿ ಹೋದ್ರೆ ನೋ ಎಂಟ್ರಿ

ಚಿಕ್ಕಬಳ್ಳಾಪುರ: ಸದಾ ಪ್ರೇಮ ಪಕ್ಷಿಗಳಿಂದ ಗಿಜುಗುಡೋ ಪ್ರೇಮಧಾಮ ನಂದಿಬೆಟ್ಟ. ಪ್ರೀತಿ, ಪ್ರೇಮ, ಪ್ರಣಯಕ್ಕೆ ಫೇಮಸ್ ಆಗಿರೋ ಆ ಪ್ರೇಮಧಾಮದಲ್ಲಿ ಅಲ್ಲಿ ಪ್ರೇಮ ಪಕ್ಷಿಗಳದ್ದೇ ಕಲರವ. ಹಾಗಂತ ನೀವು ಒಬ್ಬರೇ ಆ ಪ್ರೇಮಧಾಮಕ್ಕೆ ಹೋಗುವಂತಿಲ್ಲ. ಪ್ರೀತಿಸಿದ ಹುಡುಗಿಯ ಕೈ ಹಿಡಿದು ಜೊತೆ ಜೊತೆಯಾಗಿ ಹೋದ್ರೆ ಮಾತ್ರ ನಿಮಗೆ ಮುಕ್ತ ಅವಕಾಶ. ಆದರೆ ನೀವು ಒಬ್ಬರೇ ಆ ಪ್ರೇಮಧಾಮಕ್ಕೆ ಹೋದ್ರೆ ನಿಮಗೆ ಅಲ್ಲಿ ನಿಮಗೆ ನೋ ಎಂಟ್ರಿ.

ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಒಬ್ಬಂಟಿಯಾಗಿ ಯಾರೇ ಬಂದ್ರೂ ಪ್ರವೇಶ ನಿರ್ಬಂಧಿಸಲಾಗಿದೆ. ನಂದಿಗಿರಿಧಾಮದ ಟಿಕೆಟ್ ಕೌಂಟರ್ ಬಳಿಯೇ ನಿಮ್ಮನ್ನ ತಡೆದು ವಾಪಾಸ್ ಕಳಿಸಲಾಗುತ್ತದೆ. ಇಲ್ಲಿನ ಸಿಬ್ಬಂದಿಯನ್ನ ಎಷ್ಟೇ ಕಾಡಿ, ಬೇಡಿದ್ರೂ ಕೂಡ ಒಬ್ಬಂಟಿಗರಿಗೆ ಮಾತ್ರ ನೋ ಎಂಟ್ರಿ. ಸೂಸೈಡ್ ತಡೆಯಬೇಕೆನ್ನುವ ಉದ್ದೇಶದಿಂದ ನಂದಿಗಿರಧಾಮದ ಗೇಟ್ ಬಳಿಯೇ ಒಬ್ಬರಿಗೆ ಪ್ರವೇಶಿವಿಲ್ಲ ಅಂತಾ ನಾಮಫಲಕ ಹಾಕಲಾಗಿದೆ.

ಹಚ್ಚ ಹಸುರಿನ ವಾತಾವರಣದಲ್ಲಿ ದಿನ ಕಳೆಯೋಣ ಅಂತಾ ದೂರ ದೂರಿಂದ ಬರ್ತಿರೋ ಒಬ್ಬಂಟಿ ಪ್ರವಾಸಿಗರು ಬೇಸರದಿಂದ ವಾಪಸ್ ಹೋಗುತ್ತಿದ್ದಾರೆ. ಹೀಗಾಗಿ ನೀವು ಒಬ್ಬರೇ ನಂದಿಗಿರಿಧಾಮಕ್ಕೆ ಬರೋ ಪ್ಲಾನ್ ಇದ್ದರೆ ಸ್ವಲ್ಪ ಬದಲಾಯಿಸಿಕೊಳ್ಳಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *